ಹೆಲ್ಮೆಟ್ ಧರಿಸದ್ದಕ್ಕೆ ಲೈನ್ ಮ್ಯಾನ್ ಗೆ ದಂಡ ಹಾಕಿದ ಪೊಲೀಸರು;ಕೋಪಗೊಂಡು ಬಿಲ್ ಕಟ್ಟಿಲ್ಲ ಎಂದು ಪೊಲೀಸ್ ಠಾಣೆಯದ್ದೇ ವಿದ್ಯುತ್ ಕಟ್ ಮಾಡಿದ ಲೈನ್ ಮ್ಯಾನ್!
ಉತ್ತರಪ್ರದೇಶ;ಹಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡುತ್ತಿದ್ದ ಲೈನ್‌ಮ್ಯಾನ್ ಪೊಲೀಸರು ದಂಡ ವಿಧಿಸಿದ್ದಕ್ಕೆ ಸಿಟ್ಟಿಗೆದ್ದು ಬಿಲ್ ಕಟ್ಟಿಲ್ಲ ಎಂದು ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ.
ಉತ್ತರಪ್ರದೇಶದ ಶಾಮ್ಲಿಯಲ್ಲಿ ಈ ಘಟನೆ ನಡೆದಿದೆ.
ಈತ ವಿದ್ಯುತ್ ಕಂಬಕ್ಕೆ ಹತ್ತಿ ಪೊಲೀಸ್ ಠಾಣೆಗೆ ಸಂಪರ್ಕಗೊಂಡಿದ್ದ ವಿದ್ಯುತ್ ಲೈನ್ ಅನ್ನು ಕಡಿತಗೊಳಿಸುತ್ತಿರುವ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇನ್ನು ಘಟನೆ ಬಗ್ಗೆ ಲೈನ್‌ಮ್ಯಾನ್ ಮೆಹ್ತಾಬ್ ಪ್ರತಿಕ್ರಿಯಿಸಿದ್ದು,ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಮಯದಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ನನ್ನ ಬೈಕ್‌ನ್ನು ಅಡ್ಡ ಹಾಕಿದರು.ನಾನು ಅವರಲ್ಲಿ ಇನ್ನೊಮ್ಮೆ ಇಂತಹ ತಪ್ಪು ಆಗುವುದಿಲ್ಲ.ನನ್ನನ್ನು ಈ ಬಾರಿ ದಂಡ ಹಾಕದೇ ಬಿಟ್ಟು ಬಿಡಿ ಎಂದು ಮನವಿ ಮಾಡಿದೆ.ಆದರೆ ಪೊಲೀಸರು ನನ್ನ ಮಾತು ಕೇಳಲಿಲ್ಲ ಎಂದು ಹೇಳಿದ್ದಾರೆ.ಇದರಿಂದ ನನ್ನ ಕರ್ತವ್ಯ ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ವಿಡಿಯೋನ್ನು ಪೋಸ್ಟ್ ಮಾಡಿದ ರೂಬಿ ಅರುಣ್ ಎಂಬುವವರು,ಇಲ್ಲಿ ಇಬ್ಬರು ತಮ್ಮ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.ಉತ್ತರಪ್ರದೇಶದ ಶಾಮ್ಲಿಯಲ್ಲಿ ಒಬ್ಬರು ಪೊಲೀಸರು ಲೈನ್‌ಮ್ಯಾನ್‌ಗೆ ಹೆಲ್ಮೆಟ್ ಧರಿಸದಿರುವುದಕ್ಕೆ ಆರು ಸಾವಿರ ರೂಪಾಯಿ ದಂಡ ವಿಧಿಸಿದ್ದರು.ಆದರೆ ಅದಕ್ಕೆ ಪ್ರತಿಯಾಗಿ ಲೈನ್‌ಮ್ಯಾನ್ ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾನೆ ಏಕೆಂದರೆ ಪೊಲೀಸರು 56 ಸಾವಿರ ಮೊತ್ತದ ವಿದ್ಯುತ್ ಬಿಲ್ ಅನ್ನು ಬಾಕಿ ಇರಿಸಿಕೊಂಡಿದ್ದರು ಎಂದು ಅವರು ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.