ತಾಯಿಯ ಗರ್ಭದಲ್ಲಿರುವ ಭ್ರೂಣದ ಹೃದಯದ ಬ್ಲಾಕ್ ತೆಗೆದ ವೈದ್ಯರು; ಜಸ್ಟ್ 90 ಸೆಕೆಂಡ್ ನಲ್ಲಿ ಅಪಾಯಾಕಾರಿ ಸರ್ಜರಿ ಮಾಡಿದ ವೈದ್ಯರು!

ಗರ್ಭದಲ್ಲಿ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಬ್ಲಾಕ್ ತೆಗೆಯುವ ಮೂಲಕ ವೈದ್ಯರು ಅಚ್ಚರಿಯ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದಾರೆ.

ದೆಹಲಿಯ ಪ್ರತಿಷ್ಠಿತ ಏಮ್ಸ್‌ (AIMMS) ಕಾರ್ಡಿಯೋರಾಕಿಕ್ ಸೈನ್ಸಸ್ ಕೇಂದ್ರದ ನುರಿತ ಹೃದ್ರೋಗ ತಜ್ಞರು ಈ ಸಾಧನೆ ಮಾಡಿದ್ದಾರೆ. ಗರ್ಭದಲ್ಲಿರುವ ಭ್ರೂಣದ ಹೃದಯದಲ್ಲಿ ಬ್ಲಾಕ್ ಇರುವುದನ್ನು ಪತ್ತೆ ಮಾಡಿ ವೈದ್ಯರು, ಬ್ಲಾಕ್ ತೆರವುಗೊಳಿಸಲು ಗರ್ಭದ ಒಳಗೆ ಅಪಾಯಕಾರಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ತಾಯಿಯ ಗರ್ಭದಲ್ಲಿರುವ ಭ್ರೂಣದ ಹೃದಯ ಸಣ್ಣ ದ್ರಾಕ್ಷಿ ಗಾತ್ರದ್ದು.ಹೃದಯದ ಬ್ಲಾಕ್ ತೆರೆವು ಮಾಡಲು ಬಲೂನ್ ಡಿಲೇಷನ್ ಶಸ್ತ್ರಚಿಕಿತ್ಸೆ ಮಾಡಬೇಕು.ಅದೂ ​90 ಸೆಕೆಂಡಿನಲ್ಲಿ. ಈ ಸವಾಲಿಗೆ ತಯಾರಾಗಿ ನಿಂತ ವೈದ್ಯರ ತಂಡ. ಗರ್ಭದಲ್ಲಿದ್ದ ಭ್ರೂಣದ ಹೃದಯಕ್ಕೆ 90 ಸೆಕೆಂಡಿನಲ್ಲಿ ಯಶಸ್ವಿಯಾಗಿ ಸರ್ಜರಿ ಮಾಡಿದ್ದಾರೆ.

ಮಗುವಿನ ಹೃದಯದಲ್ಲಿ ಕವಾಟ ಬ್ಲಾಕ್ ಆಗಿದ್ದಾಗ ನಡೆಸುವ ಪ್ರಕ್ರಿಯೆಯನ್ನು ಬಲೂನ್ ಡಿಲೇಷನ್ ಎಂದು ಕರೆಯಲಾಗುತ್ತದೆ.ಅಲ್ಟ್ರಾಸೌಂಡ್ ಮೂಲಕ ಪ್ರಕ್ರಿಯೆ ನಡೆಸಲಾಗಿದೆ.ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಚಿಯನ್ನು ಚುಚ್ಚಲಾಗುತ್ತದೆ. ಬಳಿಕ ಬಲೂನಿನ ನಳಿಕೆಯನ್ನು ಬಳಸಿ ರಕ್ತದ ಹರಿವು ಸುಧಾರಿಸುವಂತೆ ಬ್ಲಾಕ್ ಆಗಿದ್ದ ಕವಾಟವನ್ನು ತೆರವುಗೊಳಿಸಲಾಗುತ್ತದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com