ಕಲಾಪಕ್ಕೆ ಮೊದಲೇ ಎಚ್​ಡಿಕೆ ಪೆನ್​ಡ್ರೈವ್ ಪ್ರದರ್ಶನ

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ದ ವಾಗ್ಧಾಳಿ ಮುಂದುವರಿಸಿರುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡುತ್ತ, ಜೇಬಿನಲ್ಲಿ ಇದ್ದ ಪೆನ್‌ಡ್ರೈವ್‌ ನ್ನು ತೋರಿಸುತ್ತ, ಇದರಲ್ಲಿ ಆಡಿಯೋ ಇದೆ ಎಂದು ಹೇಳಿದ್ದಾರೆ.

ಕಲಾಪಕ್ಕೆ ಹಾಜರಾಗುವ ಮುನ್ನ ವಿಧಾನಸೌಧದ ಮುಂದೆ ಎಚ್​ಡಿಕೆ ಪೆನ್​ಡ್ರೈವ್ ಪ್ರದರ್ಶನ ಮಾಡಿದರು. ಈ ಬಗ್ಗೆ ಮಾತನಾಡಿದ ಎಚ್​ಡಿಕೆ, ಸಾಕ್ಷಿ ಬೇಕು ಅಂತ ಹೇಳಿದ್ರಲ್ಲ ಅದಕ್ಕೆ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ವರ್ಗಾವಣೆ ದಂಧೆಯ ಪೆನ್ ಡ್ರೈವ್ ಎಂದು ಹೇಳಿದರು.

ನನ್ನ ಆಸ್ತಿ ಬಗ್ಗೆ ಬೇಕಾದರೆ ತನಿಖೆ ಮಾಡಲಿ. ಸಿಎಂಗೆ ಹೇಳಿ ತನಿಖೆ ಮಾಡಿಸಲಿ, ನಾನೇನು ಅವರನ್ನು ಹಿಡಿದುಕೊಂಡಿದ್ದೀ‌ನಾ? ನಿನ್ನೆ ಎರಡು ವರ್ಗಾವಣೆ ಆಗಿದೆ. ಇಲಾಖೆಯೊಂದರಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ಆಗಿದೆ.

ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ.ಪೆನ್​ಡ್ರೈವ್​ ನಲ್ಲಿ ಸಚಿವರೊಬ್ಬರ ಆಡಿಯೋ ಇದೆ.ವರ್ಗಾವಣೆ ದಂಧೆಗೆ ಹಣ ಕೇಳಿರುವ ಆಡಿಯೋ ಇದು ಎಂದು ಎಚ್​ಡಿಕೆ ತಿಳಿಸಿದರು.

ಟಾಪ್ ನ್ಯೂಸ್