ಯುವಕನಿಗೆ ನಗ್ನಗೊಳಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತನೆ, ಮೂವರ ಬಂಧನ
ಹಾಸನ;ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ನಗ್ನಗೊಳಿಸಿ ಅಟ್ಟಾಡಿಸಿದ ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಅರಕಲಗೂಡು ಮೂಲದ ರಂಜಿತ್,ದಯಾನಂದ್,ಆನಂದ್ ಬಂಧಿತ ಆರೋಪಿಗಳಾಗಿದ್ದಾರೆ.ಈ ಮೂವರು ಸ್ನೇಹಿತನನ್ನು ನಗ್ನಗೊಳಿಸಿ ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ಮೊದಲು ಯುವಕರು ಗುಂಪು ಸೇರಿ ಮದ್ಯಪಾನ ಮಾಡಿದ್ದಾರೆ. ಕುಡಿದ ನಂತರ ಡ್ಯಾನ್ಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನು ನಗ್ನಗೊಳಿಸಿ ಅಟ್ಟಾಡಿಸಿದ್ದಾರೆ.ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.
ಇನ್ನು ಈ ಕುರಿತ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಕಲಗೂಡು ಪೊಲೀಸರು ದೂರು ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.