ಜೈಲಿನಲ್ಲೇ ಕೈದಿಗಳ ನಡುವೆ ಹುಟ್ಟಿದ ಪ್ರೇಮ; ಪೆರೋಲ್ ನಲ್ಲಿ ಬಂದು ವಿವಾಹ

ಪ.ಬಂಗಾಳ; ಅಬ್ದುಲ್ ಹಸೀಮ್ ಅಸ್ಸಾಂನವರು ಮತ್ತು ಶಹನಾರಾ ಖಾತುನ್ ಪಶ್ಚಿಮ ಬಂಗಾಳದವರು. ಪಶ್ಚಿಮ ಬಂಗಾಳದ ಬರ್ಧಮಾನ್ ಸೆಂಟ್ರಲ್ ಜೈಲಿನಲ್ಲಿ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳನ್ನು ಬಂಧಿಸುವ ಮೊದಲು ಹಾಸಿಮ್ ಮತ್ತು ಖಾತುನ್ ಪರಸ್ಪರ ತಿಳಿದಿರಲಿಲ್ಲ.

ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿ ಪೂರ್ವ ಬರ್ಧಮಾನ್ ಜಿಲ್ಲೆಯ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಒಂದೇ ಜೈಲಿನಲ್ಲಿದ್ದ ಇಬ್ಬರ ನಡುವೆ ಸ್ನೇಹ ಹುಟ್ಟಿಕೊಂಡಿದೆ. ದಿನಕಳೆದಂತೆ ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಜೈಲಿನಲ್ಲಿ ಶುರುವಾದ ಈ ಪ್ರೇಮದ ವಿಚಾರವನ್ನು ಇಬ್ಬರೂ ತಮ್ಮ ಮನೆಯವರ ಬಳಿ ಹೇಳಿದ್ದಾರೆ. ಇಬ್ಬರಿಗೂ ಮದುವೆ ಮಾಡಿಸಲು ಮನೆಯವರು ನಿರ್ಧಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಪೆರೋಲ್‌ ನಲ್ಲಿ 5 ದಿನಗಳಿಗಾಗಿ ಹೊರಗೆ ಬಂದಿದ್ದಾರೆ.

ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಪೂರ್ವ ಬರ್ಧಮಾನ್‌ನ ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಸಂಪ್ರದಾಯದ ಪ್ರಕಾರ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಪೆರೋಲ್‌ ಅವಧಿ ಮುಗಿಯಲು ಇನ್ನು ಸ್ವಲ್ಪವೇ ಸಮಯವಿದೆ. ಆ ಬಳಿಕ ನವ ದಂಪತಿ ಮತ್ತೆ ಜೈಲಿಗೆ ಹೋಗಬೇಕಿದೆ.

ಕೊಲೆ ಪ್ರಕರಣದಲ್ಲಿ ಅಬ್ದುಲ್‌ ಹಸೀಮ್‌ ಅವರಿಗೆ 8 ವರ್ಷ ಶಿಕ್ಷೆಯನ್ನು ವಿಧಿಸಲಾಗಿದ್ದು, ಶಹನಾರಾ ಖಾತುನ್ ಅವರಿಗೆ 6 ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ.

ಟಾಪ್ ನ್ಯೂಸ್