ಯುವಕನನ್ನು ಚೂರಿಯಿಂದ ಇರಿದು ಕೊಲೆ

-ಯುವಕನನ್ನು ಚೂರಿಯಿಂದ ಇರಿದು ಕೊಲೆ

ಹಾಸನ:ಆಟೋ ಚಾಲಕನನ್ನು ಚೂರಿಯಿಂದ ಇರಿದು ಕೊಲೆ‌ ಮಾಡಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಆಟೋಚಾಲಕ ಸುಮಂತ್ (20) ಕೊಲೆಯಾದ ಯುವಕ.

ಹುಣಸಿನಕೆರೆ ನಿವಾಸಿ ಸುಮಂತ್ ನಿನ್ನೆ ಮಧ್ಯಾಹ್ನ ಸ್ನೇಹಿತರ ಜೊತೆ ಮಾತನಾಡಲು ಗವೇನಹಳ್ಳಿ ಬಳಿ ತೆರಳಿದ್ದಾಗ ಅಲ್ಲಿ ಕೆಲ ಯುವಕರ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ವೇಳೆ ಸ್ಥಳೀಯರು ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದರು.ವಾಪಸ್ ಮನೆಗೆ ಬಂದಿದ್ದ ಸುಮಂತ್ ನನ್ನು ಮತ್ತೆ ಕರೆಸಿಕೊಂಡು ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕರು ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಘಟನೆಯಿಂದ ಸುಮಂತ್ ಮನೆಯಲ್ಲಿ ರೋಧನ ಮುಗಿಲು ಮುಟ್ಟಿದೆ.

ಟಾಪ್ ನ್ಯೂಸ್