ಕಳೆದ ವರ್ಷ ಅಣ್ಣ ಮೃತಪಟ್ಟ ದಿನವೇ ಈ ವರ್ಷ ತಮ್ಮ ಸಾವು!

ಹಾಸನ;ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹಾಸನದ ಬೇಲೂರು ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

ದಿಲೀಪ್ (21)ಮೃತ. ಇವರು ಜನವರಿ 4ರಂದು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು.ಚಿಕಿತ್ಸೆ ಫಲಿಸದೆ ಜ.9 ರಂದು ಮೃತಪಟ್ಟಿದ್ದರು.

ಅಚ್ಚರಿ ಎಂದರೆ ದಿಲೀಪ್ ಅಣ್ಣ ಶ್ರೀದರ್ 2022ರ ಜನವರಿ 9 ರಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರು.ಈ ಘಟನೆ ನಡೆದ ಒಂದು ವರ್ಷದ ಬಳಿಕ ಅದೇ ದಿನಾಂಕದಂದು ದಿಲೀಪ್ ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್