ಹರ್ಯಾಣ; ಮೆರವಣಿಗೆ ವೇಳೆ ಕಲ್ಲೆಸೆತಕ್ಕೆ ಬಳಕೆ ಆರೋಪ, ಹೊಟೇಲ್ ಕಟ್ಟಡ ನೆಲಸಮ

ಹರ್ಯಾಣ;ಹರ್ಯಾಣದಲ್ಲಿನ‌ ಹಿಂಸಾಚಾರದ ವೇಳೆ ಧಾರ್ಮಿಕ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾದ ಹೋಟೆಲ್ ಸೇರಿದಂತೆ ಕೆಲವು ಅಕ್ರಮ ಕಟ್ಟಡಗಳನ್ನು ನುಹ್ ಜಿಲ್ಲೆಯಲ್ಲಿ ಅಧಿಕಾರಿಗಳು ಭಾನುವಾರ ನೆಲಸಮಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋಮುಗಲಭೆಯ ನಂತರ ಭಾನುವಾರ ನಾಲ್ಕನೇ ದಿನವಾಗಿದ್ದು, ಜಿಲ್ಲಾಧಿಕಾರಿ ಧೀರೇಂದರ್ ಖಡ್ಗತಾ ಅವರು ಒಟ್ಟು 162 ಅಕ್ರಮವಾಗಿ ನಿರ್ಮಿಸಿದ ಶಾಶ್ವತ ಮತ್ತು 591 ತಾತ್ಕಾಲಿಕ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಮತ್ತು 37 ಸೈಟ್‌ಗಳಲ್ಲಿ 57.5 ಎಕರೆ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ.

ನುಹ್ ನ ರೆಸ್ಟೋರೆಂಟ್- ಹೋಟೆಲ್ ಒಂದನ್ನು ಕಲ್ಲು ತೂರಾಟ ಮಾಡಲು ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ತಂಡವೊಂದನ್ನು ತೆರವು ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಜಿಲ್ಲಾ ಪಟ್ಟಣ ಯೋಜಕ ವಿನೀಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಹಾರ ಫ್ಯಾಮಿಲಿ ರೆಸ್ಟೊರೆಂಟ್ ನ ವಾಣಿಜ್ಯ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಮೆರವಣಿಗೆ ಮೇಲೆ ಇದೇ ಕಟ್ಟಡದಿಂದ ಕಲ್ಲು ತೂರಾಟ ನಡೆಸಿದ್ದರು ಎಂದು ಹೇಳಿದ್ದಾರೆ.

ಜು.31 ರಂದು ಹರ್ಯಾಣದ ನುಹ್ ಜಿಲ್ಲೆಯಲ್ಲಿ ಗಲಭೆ ಭುಗಿಲೆದ್ದಿತ್ತು, ಈ ಗಲಭೆಯಲ್ಲಿ ಇಬ್ಬರು ಹೋಂ ಗಾರ್ಡ್ ಗಳು ಸೇರಿ 6 ಮಂದಿ ಜೀವ ಕಳೆದುಕೊಂಡಿದ್ದರು.

ಟಾಪ್ ನ್ಯೂಸ್