ಹರ್ಯಾಣದಲ್ಲಿ ಹಿಂಸಾಚಾರ; ಮಸೀದಿಗೆ ನುಗ್ಗಿ ಇಮಾಮ್ ಗೆ ಗುಂಡಿಟ್ಟು ಹತ್ಯೆ, ಮಸೀದಿಗೆ ಬೆಂಕಿ

ಗುರುಗ್ರಾಮ್:ಗುರುಗ್ರಾಮ್ ನ ಮಸೀದಿಯೊಂದರ ಮೇಲೆ ದಾಳಿ ಮಾಡಿ ಇಮಾಮ್ ಗೆ ಗುಂಡಿಕ್ಕಿ ಹತ್ಯೆ ಮಾಡಿ ಮಸೀದಿಗೆ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ.

ನುಹ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಗುರುಗ್ರಾಮ್ನ ಸೆಕ್ಟರ್ 57 ಪ್ರದೇಶದಲ್ಲಿ 26 ವರ್ಷದ ಇಮಾಮ್ ನನ್ನು ಹತ್ಯೆ ಮಾಡಲಾಗಿದ್ದು ನೆರೆಯ ನುಹ್ನಿಂದ ಹಿಂಸಾಚಾರ ಹರಡುತ್ತಿದ್ದಂತೆ ಮಸೀದಿಗೆ ಬೆಂಕಿ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಧ್ಯರಾತ್ರಿಯ ನಂತರ ಗುಂಪೊಂದು ಸೆಕ್ಟರ್ 57ರ ಅಂಜುಮನ್ ಮಸೀದಿಗೆ ನುಗ್ಗಿ, ಗುಂಪಿನಲ್ಲಿದ್ದ ಕೆಲವರು ಮಸೀದಿಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಬೆಂಕಿ ಹಚ್ಚಿದ್ದಾರೆ.

ಅಧಿಕಾರಿಗಳು ಮಂಗಳವಾರ ನುಹ್ನಲ್ಲಿ ಕರ್ಫ್ಯೂ ಜಾರಿ ಮಾಡಿದ್ದು ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕರು ಸಾವನ್ನಪ್ಪಿದ್ದಾರೆ.

ಮೃತ ಗೃಹರಕ್ಷಕರನ್ನು ನೀರಜ್ ಮತ್ತು ಗುರುಸೇವಕ್ ಎಂದು ಗುರುತಿಸಲಾಗಿದೆ.ಅವರನ್ನು ಖೇದಾಲಿ ದೌಲಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ