ಹರ್ಯಾಣ;ಮುಸ್ಲಿಂ ಸಮುದಾಯದವರು ಇಲ್ಲೇ ಇರುತ್ತಾರೆ, ಅವರ ಮೇಲೆ ದೌರ್ಜನ್ಯಕ್ಕೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹರಿಯಾಣದ ರೈತ ಸಂಘಟನೆಗಳು ಮತ್ತು ಖಾಪ್ ಪಂಚಾಯತ್‌ಗಳ ಮುಖಂಡರು ನಿರ್ಣಯ ತೆಗೆದುಕೊಂಡಿದ್ದಾರೆ.
ನುಹ್ ಜಿಲ್ಲೆಯಲ್ಲಿ ಹಿಂಸಾಚಾರದ ಬಳಿಕ ಮುಸ್ಲಿಮರಿಗೆ ಆರ್ಥಿಕವಾಗಿ,ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು.ಆ ಬಳಿಕ ಈ ಬೆಳವಣಿಗೆ ನಡೆದಿದೆ.
ಹಿಸಾರ್‌ನ ಬಾಸ್ ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್ ಸಮುದಾಯಗಳ ಸುಮಾರು 2,000 ರೈತರು ರೈತ ಪಂಚಾಯತ್ ನಲ್ಲಿ ಪಾಲ್ಗೊಂಡಿದ್ದರು.ಹಿಂಸಾಚಾರದ ನಂತರ ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ರೈತರು ಮುಂದಾಗಿದ್ದಾರೆ.
ರೈತ ಮುಖಂಡ ಸುರೇಶ್ ಕೋತ್ ಈ ಕುರಿತು ಮಾತನಾಡಿ, ಮುಸ್ಲಿಮರು ಇಲ್ಲೇ ಇರುತ್ತಾರೆ.ಯಾರೂ ಅವರನ್ನು ಮುಟ್ಟುವಂತಿಲ್ಲ.ಎಲ್ಲಾ ರೈತರು ಅವರ ರಕ್ಷಣೆಗೆ ಬದ್ಧರು ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಕೆಲವು ಹಳ್ಳಿಗಳಲ್ಲಿ ಮುಸ್ಲಿಮರ ಪ್ರವೇಶ ನಿಷೇಧದ ಬಗ್ಗೆ ವರದಿಗಳು ಸುಳ್ಳು ಎಂದು ಹೇಳಿದ್ದಾರೆ.
ಇದಲ್ಲದೆ ರೈತರು ನೂಹ್‌ನಲ್ಲಿ ಶಾಂತಿ ಮರುಸ್ಥಾಪಿಸುವ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಜನರನ್ನು ಪ್ರಚೋದಿಸುವವರ ವಿರುದ್ಧ ಕ್ರಮಕೈಗೊಳ್ಳಲು ಪಂಚಾಯತ್ ಒತ್ತಾಯಿಸಿದೆ.