ಶಿವಮೊಗ್ಗ;ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಮ್ ಯುವಕರು ನನ್ನ ಮೇಲೆ ಹಲ್ಲೆ ಮಾಡಿ ಆಟೋವನ್ನು ಪುಡಿಗೈದಿದ್ದಾರೆ
ಈಶ್ವರಪ್ಪ ಅವರ ಎದುರು ವ್ಯಕ್ತಿಯೋರ್ವ ಎಸ್ಪಿ ಕಚೇರಿ ಬಳಿ ದೂರು ಹೇಳಿದ ವಿಡಿಯೋ ವೈರಲ್ ಆಗಿತ್ತು.ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಹರೀಶ್ ರಾವ್ ಎಂಬ ಚಾಲಕ ತನ್ನ ಆಟೋದ ಜೊತೆ ಎಸ್ಪಿ ಕಚೇರಿಗೆ ಬಂದಿದ್ದ.ಎಸ್‌ಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿಕ್ಕಾಗ ಹರೀಶ್ ರಾವ್ ಬಿಜೆಪಿಗೆ ಮತ ನೀಡಿದ್ದಕ್ಕೆ ನನ್ನ ಮೇಲೆ ಅಬ್ರಾರ್ , ನಝರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ.
ರಿಕ್ಷಾ ತೋರಿಸಿ ಕಣ್ಣೀರಿಟ್ಟಾಗ ಈಶ್ವರಪ್ಪ ಸ್ವಲ್ಪ ಹಣವನ್ನು ಕೂಡ ತೆಗೆದು ಕೊಟ್ಟಿದ್ದರು.ಅಲ್ಲದೆ ಸೂಕ್ತ ತನಿಖೆ ನಡೆಸುವಂತೆ ಎಸ್ಪಿಗೆ ತಿಳಿಸುವುದಾಗಿ ಹೇಳಿದ್ದರು.
ವಿಡಿಯೋ ವೈರಲ್ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಘಟನೆ ವಿರುದ್ಧ ಆಕ್ರೋಶ ಉಂಟಾಗಿತ್ತು.ಇದೀಗ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.
ಹರೀಶ್ ರಾವ್, ಬಿಜೆಪಿಗೆ ಮತನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನಾನು ಮುಸ್ಲಿಮ್ ಸ್ನೇಹಿತರು ಒಟ್ಟಿಗೆ ಮದ್ಯಪಾನ ಮಾಡಿದ್ದೆವು.ಅಲ್ಲಿ ಜಗಳವಾಗಿ ಆಗ ಆಟೋ ಟಾಪ್, ಗ್ಲಾಸ್ ಒಡೆದು ಹೋಗಿದೆ. ಅದಕ್ಕೆ ದೂರು ಕೊಡಲು ಎಸ್‌ಪಿ ಕಚೇರಿಗೆ ಹೋಗಿದ್ದೆ ಎಂದು ಹೇಳಿದ್ದಾನೆ.
ನಾನು ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹೊಡೆದರು ಎಂದು ಹೇಳಿಲ್ಲ.ನನ್ನ ಬಳಿ ಇದ್ದ ಅಮೀರ್ ಆ ತರಹ ಹೇಳಿದ, ನನ್ನ ತಪ್ಪಿಲ್ಲ. ಈಶ್ವರಪ್ಪ ಅವರು ದುಡ್ಡು ಕೊಟ್ಟರು.ಆದರೆ ಅದು ಎಷ್ಟಿತ್ತು ಎಂದು ಗೊತ್ತಿಲ್ಲ. ನಾನು ನಶೆಯಲ್ಲಿದ್ದೆ ಅದನ್ನು ಯಾರೋ ಜೇಬಿನಿಂದ ಎತ್ತಿಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಆದ ಜಗಳಕ್ಕೆ ಆಟೋ ಹಾನಿಯಾಗಿದ್ದು, ಎಲ್ಲರೂ ಬಾಲ್ಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ.