ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದವನಿಗೆ ಬರೊಬ್ಬರಿ 24 ಕೋಟಿ ಸರಕಾರದಿಂದ ಪರಿಹಾರ; ಏನಿದು ಪ್ರಕರಣ?

ಮಾಡದ ತಪ್ಪಿಗೆ ಅನ್ಯಾಯವಾಗಿ ಸುಮಾರು 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನ್ಯೂಜಿಲೆಂಡ್‌ ವ್ಯಕ್ತಿಗೆ ಮಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಸಿಗಲಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಅಲನ್ ಹಾಲ್ ಎಂಬ ವ್ಯಕ್ತಿ 1986 ರಲ್ಲಿ ಆಕ್ಲೆಂಡ್ ಮನೆ ಆಕ್ರಮಣದ ಸಮಯದಲ್ಲಿ ವ್ಯಕ್ತಿಯೋರ್ವನಿಗೆ ಮಾರಣಾಂತಿಕವಾಗಿ ಇರಿದು ಕೊಲೆ ಮಾಡಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

ಆದರೆ ಪ್ರಕರಣದಲ್ಲಿ ಆಲನ್‌ ಹಾಲ್‌ ಅಪರಾಧಿ ಎಂದು ಸಾಬೀತುಪಡಿಸುವಂತಹ ಯಾವುದೇ ಸಾಕ್ಷಿ ಆಧಾರಗಳು ಸಿಕ್ಕಿರಲಿಲ್ಲ.ಆ ಬಗ್ಗೆ ಯಾವುದೇ ಫೋರೆನ್ಸಿಕ್ ಪುರಾವೆಗಳಿರಲಿಲ್ಲ.ಅಲ್ಲದೇ ಕೊಲೆ ಮಾಡಿದ್ದ ಆಕ್ರಮಣಕಾರನು ವಿಭಿನ್ನ ಎತ್ತರ ಹೊಂದಿದ್ದ ಮತ್ತು ಆತ ಬೇರೆ ಜನಾಂಗೀಯ ಎಂದು ಹೇಳಲಾಗಿದೆ.

ಸುಳ್ಳು ಕೇಸ್ ನಲ್ಲಿ ಹಾಲ್‌ನನ್ನು ತಪ್ಪಿತಸ್ಥನೆಂದು ಜೈಲಿಗೆ ಹಾಕಲಾಗಿತ್ತು.ನಂತರದಲ್ಲಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಾಲ್‌ನನ್ನು 1994ರಲ್ಲಿ ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಯಿತು.

ಆದರೆ ಬಿಡುಗಡೆಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 2012ರಲ್ಲಿ ಮತ್ತೆ ಜೈಲಿಗೆ ಕಳುಹಿಸಲಾಯಿತು.ಕೊನೆಗೂ ಕಳೆದ ವರ್ಷ ಹಾಲ್‌ ಬಿಡುಗಡೆಯಾಗಿ ಖುಲಾಸೆಗೊಂಡಿದ್ದರು.

ನ್ಯೂಜಿಲೆಂಡ್‌ನ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯ ವೇಳೆ ಇದು ಅಸಮರ್ಥತೆಯನ್ನು ತೋರಿಸುವ ಅನ್ಯಾಯವಾಗಿದೆ ಎಂದು ಒಪ್ಪಿಕೊಂಡಿದೆ.

ಈ ಮಧ್ಯೆ ವ್ಯಕ್ತಿಯೊಬ್ಬ ತಪ್ಪಾಗಿ ಜೀವನದ ಬಹುಕಾಲವನ್ನು ಜೈಲಿನಲ್ಲೇ ಕಳೆದಿರುವ ಬಗ್ಗೆ ಅಲ್ಲಿನ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.ಅಲ್ಲದೇ NZ$4.9 ಮಿಲಿಯನ್ ಅಂದರೆ ಸುಮಾರು 24 ಕೋಟಿ ರೂಪಾಯಿಗಳ ಪರಿಹಾರದ ನೀಡುವುದಾಗಿ ಅಲ್ಲಿನ ನ್ಯಾಯ ಸಚಿವ ಡೆಬೊರಾ ರಸೆಲ್ ಹೇಳಿದ್ದಾರೆ.

ಟಾಪ್ ನ್ಯೂಸ್