ವಾರಣಾಸಿ:ಹಿಂದೂಗಳ ಕಡೆಯ ಪ್ರಮುಖ ದಾವೆದಾರರಲ್ಲಿ ಒಬ್ಬರಾದ ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ವಿಶೆನ್ ಜ್ಞಾನವ್ಯಾಪಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ನಾನು ಮತ್ತು ಕುಟುಂಬ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಕಿರುಕುಳ ಕಾರಣ ನೀಡಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ನಾನು ಮತ್ತು ಅವರ ಕುಟುಂಬ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ವಾರಣಾಸಿಯ ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದಲ್ಲಿ ಐವರು ಹಿಂದೂ ಮಹಿಳಾ ಫಿರ್ಯಾದಿಗಳಲ್ಲಿ ಒಬ್ಬರಾದ ರಾಖಿ ಸಿಂಗ್ ಅವರು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ಜಿತೇಂದ್ರ ಅವರು ಹೇಳಿದ್ದಾರೆ. ಪ್ರಕರಣವನ್ನು ಮುಂದುವರಿಸಲು ಅಗತ್ಯವಾದ ಸಂಪನ್ಮೂಲಗಳ ಕೊರತೆ ಮತ್ತು “ಧರ್ಮವಿರೋಧಿಗಳ ಕಿರುಕುಳ”ದಿಂದಾಗಿ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಜಿತೇಂದ್ರ ಅವರು ಹೇಳಿದ್ದಾರೆ.
ತಮ್ಮ ತೀರ್ಪಿನ ಕುರಿತು ಅವರು ಇನ್ನೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ.
ಐವರು ಹಿಂದೂ ಮಹಿಳೆಯರು – ರಾಖಿ ಸಿಂಗ್, ಮಂಜು ವ್ಯಾಸ್, ರೇಖಾ ಪಾಠಕ್, ಸೀತಾ ಸಾಹು ಮತ್ತು ಲಕ್ಷ್ಮಿ ದೇವಿ – ಆಗಸ್ಟ್ 2021 ರಲ್ಲಿ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ವಾರಣಾಸಿಯ ನ್ಯಾಯಾಲಯದಲ್ಲಿ ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣವನ್ನು ದಾಖಲಿಸಿದ್ದರು. ಫಿರ್ಯಾದಿಗಳು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ದೈನಂದಿನ ಪೂಜೆಗೆ ಅವಕಾಶ ಕೋರಿದ್ದರು.
ದೇಶ ಮತ್ತು ಧರ್ಮದ ಹಿತಾಸಕ್ತಿಯಿಂದ ವಿವಿಧ ನ್ಯಾಯಾಲಯಗಳಲ್ಲಿ ನಾವು ಸಲ್ಲಿಸಿರುವ ಎಲ್ಲಾ ಪ್ರಕರಣಗಳ ಮನವಿಯಿಂದ ನಾನು ಮತ್ತು ನನ್ನ ಕುಟುಂಬ ಸದಸ್ಯರು ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು ಜಿತೇಂದ್ರ ಹೇಳಿದ್ದಾರೆ. ನನ್ನ ಸೊಸೆ ರಾಖಿ ಸಿಂಗ್ ಮತ್ತು ನಾಲ್ವರು ಮಹಿಳೆಯರೊಂದಿಗೆ ಪ್ರಕರಣ ದಾಖಲಿಸಿದ್ದಾರೆ.
ಕೆಲವು ತಿಂಗಳ ಹಿಂದೆ, ಪ್ರಕರಣ ಮುಂದುವರಿಸಲು ಅಗತ್ಯವಾದ ಹಣವನ್ನು ಹೊಂದಿಸಲು ನಾನು ನನ್ನ ಕಾರನ್ನು ಮಾರಿದೆ.ಆದರೆ ಈಗ ನಾನು ಬಹಳ ಸೀಮಿತ ಸಂಪನ್ಮೂಲ ಮಾತ್ರ ಹೊಂದಿದ್ದೇನೆ.ಇದರಿಂದಾಗಿ ನನ್ನ ಕುಟುಂಬ ಸದಸ್ಯರು ಮತ್ತು ನಾನು ಈ ಪ್ರಕರಣಗಳ ಮನವಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎಂದು ಜಿತೇಂದ್ರ ಅವರು ಹೇಳಿದ್ದಾರೆ.