ಪೋರಬಂದರ್ (ಗುಜರಾತ್): ಪೋರಬಂದರ್‌ನ ಪ್ರತಿಷ್ಠಿತ ಆರ್ಯ ಕನ್ಯಾ ಗುರುಕುಲದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಇತರ ಹಾಸ್ಟೆಲ್ ಮೇಟ್‌ಗಳ ವಿರುದ್ಧ ಗಂಭೀರ ಆರೋಪ ಮಾಡಿದ ನಂತರ ವಿವಾದ ಭುಗಿಲೆದ್ದಿದೆ.
ಹಾಸ್ಟೆಲ್‌ನಲ್ಲಿರುವ ಹುಡುಗಿಯರನ್ನು ಲೆಸ್ಬಿಯನ್ (ಸಲಿಂಗ)
ಬಂಧಗಳಿಗೆ ಬಲವಂತಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಗುರುಕುಲದ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದು ಸಂಸ್ಥೆಯ ಪ್ರತಿಷ್ಠೆಗೆ ಮಸಿ ಬಳಿಯುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ.
ಈ ವಿಷಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ಬರುತ್ತಿದ್ದಂತೆ ಅದರ ಸದಸ್ಯೆ ಡಾ.ಚೆತ್ನಾಬೆನ್ ತಿವಾರಿ ವಿಚಾರಣೆ ಆರಂಭಿಸಿದರು. ಜಿಲ್ಲಾ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ.
ಇವು ಆಧಾರರಹಿತ ಆರೋಪಗಳು.ಈ ಸಂಸ್ಥೆಯನ್ನು 1936 ರಲ್ಲಿ ಸ್ಥಾಪಿಸಲಾಯಿತು ಮತ್ತು ಇಲ್ಲಿಯವರೆಗೆ ಅಂತಹ ಘಟನೆ ಸಂಭವಿಸಿಲ್ಲ ಭವಿಷ್ಯದಲ್ಲಿ ಸಂಭವಿಸುವುದಿಲ್ಲ ಎಂದು ಗುರುಕುಲದ ಪ್ರಾಂಶುಪಾಲರಾದ ರಂಜನಾಬೆನ್ ಮಜಿಥಿಯಾ ಹೇಳಿದರು.