ನವದೆಹಲಿ;ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಓರ್ವ ಒರಟುತನದ ವ್ಯಕ್ತಿ ಎಂದುಕೊಂಡಿದ್ದೆ.ಆದರೆ ಅವರಿಗೆ ಮಾನವೀಯತೆ ಇದೆ ಎಂದು 2006 ರ ಘಟನೆಯನ್ನು ನೆನೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂದು ನಾನು ರಾಜ್ಯಸಭೆಯಿಂದ ನಿರ್ಗಮಿಸುತ್ತಿದ್ದೇನೆ ಎಂಬ ಸಂಸತ್ತಿನಲ್ಲಿ ಮೋದಿ ಕಣ್ಣೀರು ಹಾಕಲಿಲ್ಲ. ನೀವು ಅವರ ಭಾಷಣದಲ್ಲಿದ್ದ ವಿಚಾರಗಳನ್ನು ಓದಿದರೆ ಇದು ಗೊತ್ತಾಗುತ್ತದೆ.ಅಲ್ಲಿ ಮೋದಿ ಒಂದು ಘಟನೆಯ ಬಗ್ಗೆ ಮಾತನಾಡುತ್ತಿದ್ದರು ಎಂದರು.
2006ರಲ್ಲಿ ಕಾಶ್ಮೀರದಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಗುಜರಾತ್‌ನ ಕೆಲವು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು.ಆಗ ಕಾಶ್ಮೀರದಲ್ಲಿ ನಾನು ಸಿಎಂ ಆಗಿದ್ದೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದರು.ಅವರು ನನಗೆ ಕರೆ ಮಾಡಿದರು.ಕಾಶ್ಮೀರದಲ್ಲಿ ನಡೆಯುತ್ತಿದ್ದ ಭೀಕರ ದೌರ್ಜನ್ಯದ ಘಟನಾವಳಿಗಳೂ ನನ್ನನ್ನೂ ತೀವ್ರ ಬೇಸರಕ್ಕೆ ತಳ್ಳಿದ್ದವು.ಆ ಸಂದರ್ಭದಲ್ಲಿ ನಾನು ಅವರ ಜೊತೆ ಮಾತನಾಡಲಿಲ್ಲ.ಆದ್ರೆ ನಾನು ಅಳುತ್ತಿದ್ದ ಸನ್ನಿವೇಶವನ್ನು ನನ್ನ ಸಿಬ್ಬಂದಿ ಫೋನಿನ ಮೂಲಕವೇ ಅವರಿಗೆ ಕೇಳಿಸುತ್ತಿದ್ದರು. ಶ್ರೀನಗರದಲ್ಲಿ 2006ರ ಮೇ.25 ರಂದು ಈ ಘಟನೆ ನಡೆದಿದ್ದು,ಗುಜರಾತ್ ನಾಲ್ವರು ಪ್ರವಾಸಿಗರು ಬಲಿಯಾಗಿದ್ದರು ಮತ್ತೆ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೋದಿ ನನ್ನ ಕಚೇರಿಗೆ ಪದೇ ಪದೇ ಫೋನ್ ಮಾಡುತ್ತಲೇ ಇದ್ದರು.ನಂತರದಲ್ಲಿ ಘಟನೆಯಲ್ಲಿ ಬಲಿಯಾದ ಜನರ ಮೃತದೇಹಗಳನ್ನು ವಿಮಾನದ ಮೂಲಕ ಸ್ಥಳಾಂತರಗೊಳಿಸಲಾಗುತ್ತಿತ್ತು.ಮೃತರ ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿತ್ತು, ಅವರು ನಿರಂತರ ಸಾಂತ್ವಾನ ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ಅವರಿಗೆ ಜನರ ಬಗ್ಗೆ ಅಷ್ಟೊಂದು ಕಾಳಜಿ ಬರಲು ಸಾಧ್ಯವಿಲ್ಲ.ಯಾಕಂದ್ರೆ ಪತ್ನಿಯಾಗಲೀ ಮಕ್ಕಳಾಗಲೀ ಅವರಿಗಿಲ್ಲ.ಆದ್ರೆ ಅಂದು ತನ್ನ ರಾಜ್ಯದ ಜನರಿಗಾಗಿ ಅವರು ಮಾನವೀಯತೆ ತೋರಿಸಿದ್ದರು ಎಂದು ಹಿಂದಿನ ಘಟನೆಯನ್ನು ಸ್ಮರಿಸಿದ್ದಾರೆ.