ಪರೀಕ್ಷಾ ದಿನ ಅಪ್ಪ ಮಾಡಿದ ಯಡವಟ್ಟಿಗೆ ಗಲಿಬಿಲಿಗೊಂಡ ಬಾಲಕಿ; ಬಾಲಕಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿ ಸೈರನ್ ಹಾಕಿಕೊಂಡು ಬಂದು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿ!

ಪರೀಕ್ಷಾ ದಿನ ಅಪ್ಪ ಮಾಡಿದ ಯಡವಟ್ಟಿಗೆ ಗಲಿಬಿಲಿಗೊಂಡ ಬಾಲಕಿ; ಬಾಲಕಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿ ಸೈರನ್ ಹಾಕಿಕೊಂಡು ಬಂದು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿ!

ಗುಜರಾತ್‌ನ ಅಹಮದಾಬಾದ್‌ನಲ್ಲಿ ತಂದೆಯೊಬ್ಬ ಕೆಲಸಕ್ಕೆ ಹೋಗುವ ಒತ್ತಡದಲ್ಲಿ ಮಗಳನ್ನು ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಬಾಲಕಿ ತನ್ನ ರೋಲ್ ನಂಬರ್ ಗಾಗಿ ಎಷ್ಟೇ ಹುಡುಕಾಡಿದರೂ ವ್ಯರ್ಥವಾಗಿತ್ತು.ಜೊತೆಗೆ ಬಾಲಕಿಗೆ ತನಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರ ಇದಲ್ಲ ಎಂಬುವುದು ಮನವರಿಕೆಯಾಗಿತ್ತು.

ಇದರಿಂದ ಗಲಿಬಿಲಿಗೊಂಡ ವಿದ್ಯಾರ್ಥಿನಿಯನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಆಕೆಯ ಬಳಿ ಬಂದು ಏನಾಯಿತೆಂದು ವಿಚಾರಿಸಿದ್ದಾರೆ.

ಈ ವೇಳೆ ವಿದ್ಯಾರ್ಥಿನಿ ಎಕ್ಸಾಂ ಸೆಂಟರ್ ತಪ್ಪಿದ್ದಾಗಿ ತಿಳಿಸಿದ್ದಾಳೆ.ಅಧಿಕಾರಿಯು ಆಕೆಯ ಹಾಲ್ ಟಿಕೆಟ್ ಪರಿಶೀಲಿಸಿದ್ದಾರೆ.ಪರೀಕ್ಷೆಗೆ ಕೆಲವೇ ನಿಮಿಷಗಳು ಮಾತ್ರ ಬಾಕಿ ಇತ್ತು.ಆದರೆ ಟಿಕೆಟ್‌ನಲ್ಲಿ ನಮೂದಿಸಲಾದ ಕೇಂದ್ರವು 20 ಕಿಮೀ ದೂರದಲ್ಲಿತ್ತು.

ಬಾಲಕಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿದ ಪೊಲೀಸ್ ಅಧಿಕಾರಿ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಬಾಲಕಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ.ಬಾಲಕಿಯ ಒಂದು ವರ್ಷ ಹಾಳಾಗದಂತೆ ನೋಡಿಕೊಂಡಿದ್ದಾರೆ‌.ಪೊಲೀಸ್ ಅಧಿಕಾರಿಯ ಈ ಕೆಲಸಕ್ಕೆ ವ್ಯಾಪಕ‌ ಮೆಚ್ಚುಗೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com