ಗುಜರಾತ್;ಗುಜರಾತ್ ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು,ಬಿಜೆಪಿ ಮತ್ತೆ ಸರಕಾರವನ್ನು ಗುಜರಾತ್ ನಲ್ಲಿ ರಚಿಸಲಿದೆ.
ಗುಜರಾತ್ ನಲ್ಲಿ ಬಿಜೆಪಿ 156 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ.ಈ ಬಗ್ಗೆ ಪ್ರದಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ನಲ್ಲಿ ಏನಿದೆ?
ಗುಜರಾತ್ ಗೆ ಧನ್ಯವಾದಗಳು.ಅಭೂತಪೂರ್ವ ಚುನಾವಣಾ ಫಲಿತಾಂಶಗಳನ್ನು ನೋಡಿ ನಾನು ಭಾವುಕನಾಗಿದ್ದಾನೆ. ಜನರು ಅಭಿವೃದ್ಧಿಯ ರಾಜಕಾರಣಕ್ಕೆ ಆಶೀರ್ವಾದ ಮಾಡಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ವೇಗವು ಇನ್ನಷ್ಟು ವೇಗದಲ್ಲಿ ಮುಂದುವರಿಯಬೇಕೆಂದು ಅವರು ಬಯಸುತ್ತಾರೆ. ನಾನು ಗುಜರಾತ್ನ ಜನಶಕ್ತಿಗೆ ತಲೆಬಾಗುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಯ ಎಲ್ಲಾ ಕಾರ್ಯಕರ್ತರು ಚಾಂಪಿಯನ್ ಗಳು ಎಂದು ಹೇಳಲು ಬಯಸುತ್ತಿದ್ದೇನೆ.ನಿಮ್ಮ ಪರಿಶ್ರಮ ಇಲ್ಲದೆ ಈ ಐತಿಹಾಸಿಕ ಗೆಲುವು ಸಾಧ್ಯವೇ ಇರಲಿಲ್ಲ. ನೀವೇ ನಮ್ಮ ಪಕ್ಷದ ಶಕ್ತಿ ಎಂದು ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ,
ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಮುಂದುವರಿಯಲಿದ್ದು, ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 40 ಸೀಟುಗಳನ್ನು ಗೆದ್ದಿದೆ. ಸರಕಾರ ರಚನೆಯ ಹಾದಿ ಸುಗಮವಾಗಿದೆ. ಇದೇ ವೇಳೆ ಬಿಜೆಪಿಯ ಆಪರೇಶನ್ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹಿಮಾಚಲದ ಕಾಂಗ್ರೆಸ್ ವೀಕ್ಷಕ ರಾಜೀವ ಶುಕ್ಲಾ ಹೇಳಿದ್ದಾರೆ.
Thank you Gujarat. I am overcome with a lot of emotions seeing the phenomenal election results. People blessed politics of development and at the same time expressed a desire that they want this momentum to continue at a greater pace. I bow to Gujarat’s Jan Shakti.
— Narendra Modi (@narendramodi) December 8, 2022