ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿರುವವರ ಗಮನಕ್ಕೆ; ಹಣ ಜಮೆಯಾಗಬೇಕಿದ್ದರೆ ನೀವು ತಪ್ಪದೆ ಈ ಕೆಲಸ ಮಾಡಬೇಕು..

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಬಳಿಕ ಈ ಕೆಲಸ ಮಾಡದಿದ್ದರೆ ಮನೆ ಯಜಮಾನಿ ಫಲಾನುಭವಿಯಿಂದ ವಂಚಿತರಾಗುವ ಸಾಧ್ಯತೆ ಇದೆ.

ಯಜಮಾನಿಯರು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯ. ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.

ಹಣವನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದ್ದು ಆದ್ದರಿಂದ ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.

ಅರ್ಜಿ ಸಲ್ಲಿಸಿದ್ದರು ಕೂಡ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಗಾಗಿ ಅರ್ಜಿ ಸಲ್ಲಿಸಿ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮಾಡಿಸಬೇಕು.

ಇಲ್ಲವಾದಲ್ಲಿ ಯೋಜನೆಯ ಹಣ ಎಕೌಂಟ್ ಗೆ ವರ್ಗಾವಣೆ ವೇಳೆ ಸಮಸ್ಯೆ ಎದುರಾಗಲಿದೆ ಎನ್ನಲಾಗಿದೆ.

ಟಾಪ್ ನ್ಯೂಸ್