ಮದುವೆಗೆ ಹೋಗುವುದನ್ನೇ ಮರೆತ ವರ; ವಿಚಿತ್ರ ಘಟನೆ
ಬಿಹಾರ:ಕಂಠಪೂರ್ತಿ ಕುಡಿದು ಬಿದ್ದು ಮದುವೆ ಮಂಟಪಕ್ಕೆ ಹೋಗುವುದನ್ನೇ ವರ ಮರೆತ ವಿಚಿತ್ರ ಘಟನೆ
ಬಿಹಾರದ ಭಾಗಲ್ಪುರದಿಂದ ವರದಿಯಾಗಿದೆ.
ಭಾಗಲ್ಪುರದಲ್ಲಿ ಮದುವೆ ಹಿಂದಿನ ದಿನ ವರ ತನ್ನ ಸ್ನೇಹಿತರ ಜತೆ ಸೇರಿಕೊಂಡು ಮನೆಯಿಂದ ಹೊರಗೆ ಬಂದು ಮದ್ಯಪಾನ ಮಾಡಿದ್ದಾನೆ.ಮಿತಿಮೀರಿದ ಮದ್ಯಪಾನದ ಕಾರಣದಿಂದ ಎದ್ದು ನಿಲ್ಲಲು ಸಾಧ್ಯವಾಗದ ಹಂತಕ್ಕೆ ತಲುಪಿದ್ದಾನೆ.ನಿದ್ರೆಗೆ ಜಾರಿದ್ದಾನೆ.ಕೊನೆಗೆ ವರ ತನ್ನ ಮದುವೆಗೆ ಹೋಗುವುದನ್ನೇ ಮರೆತು ಬಿಟ್ಟಿದ್ದಾನೆ.
ಆದರೆ ಮದುವೆ ಮಂಟಪದಲ್ಲಿ ಹೆಣ್ಣಿನ ಕಡೆಯವರು ಎಲ್ಲಾ ಸಿದ್ಧತೆ ನಡೆಸಿದ್ದರು.ಮುಹೂರ್ತಕ್ಕೆ ಸಮಯವಾದರೂ ವರ ಬಂದಿಲ್ಲ.ವರನ ಮನೆಯವರು ಆತನಿಗೆ ಹುಡುಕಾಟ ನಡೆಸಿ ಕಂಗಾಲಾಗಿದ್ದಾರೆ.
ಮದುವೆ ಗಂಡಿಗಾಗಿ ಹೆಣ್ಣಿನ ಕಡೆಯವರು ಕಾದು ಸುಸ್ತಾಗಿ ಮನೆಗೆ ಕೋಪದಿಂದ ಹೋಗಿದ್ದಾರೆ. ಕೊನೆಗೆ ನಡೆಯಬೇಕಾಗಿದ್ದ ಮದುವೆ ರದ್ದಾಗಿದೆ.
ಮಿತಿಮೀರಿದ ಮದ್ಯಪಾನ ಸೇವನೆಯಿಂದ ಅಸ್ವಸ್ಥನಾಗಿದ್ದ ವರ, ತನ್ನ ಮದುವೆ ನಡೆಯಬೇಕಿದ್ದ ಮರುದಿನ ಹುಡುಗಿ ಮನೆಗೆ ಹೋಗಿದ್ದಾನೆ.ಈ ವೇಳೆ ಗಲಾಟೆ ನಡೆದು ಮದುವೆ ಮುರಿದು ಬಿದ್ದಿದೆ.