ಆರೆಸ್ಸೆಸ್ ಕಚೇರಿಗೆ ಭೇಟಿ ಕೊಟ್ಟ ಕುಸ್ತಿಪಟು ಗ್ರೇಟ್ ಖಲಿ

ನಾಗಪುರ: ಡಬ್ಲ್ಯೂಡಬ್ಲ್ಯೂಇ ‘ದಿ ಗ್ರೇಟ್ ಖಲಿ’ ಎಂದೇ ಜನಪ್ರಿಯರಾಗಿರುವ ಅಂತಾರಾಷ್ಟ್ರೀಯ ಕುಸ್ತಿಪಟು ದಲೀಪ್ ಸಿಂಗ್ ಮಹಾರಾಷ್ಟ್ರದ ನಾಗಪುರದಲ್ಲಿರುವ ಆರ್ ಎಸ್ ಎಸ್ ಕಚೇರಿಗೆ ಭೇಟಿ ಮಾಡಿದ್ದಾರೆ.

ಕಚೇರಿಗೆ ಭೇಟಿ ಮಾಡಿ ಡಾ. ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಗೌರವ ಸಲ್ಲಿಸಿದ್ದಾರೆ.

ಆರ್ ಎಸ್ ಎಸ್ ಪ್ರಚಾರ ವಿಭಾಗವಾದ ವಿಶ್ವ ಸಂವಾದ್ ಕೇಂದ್ರ ತನ್ನ ಫೇಸ್ಬುಕ್ ಪುಟದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ದಿವಂಗತ ಆರ್ ಎಸ್ ಎಸ್ ಮುಖ್ಯಸ್ಥ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಸ್ಮಾರಕಕ್ಕೆ ದಿ ಗ್ರೇಟ್ ಖಲಿ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿರುವುದಾಗಿ ತಿಳಿಸಿದೆ.

ಟಾಪ್ ನ್ಯೂಸ್