ಚಾಕಲೇಟ್ ಪೌಡರ್ ನಲ್ಲಿಟ್ಟು ಲಕ್ಷಾಂತರ ಮೌಲ್ಯದ ಚಿನ್ನ ಸಾಗಾಟ

ತಮಿಳುನಾಡು;ಚಾಕೊಲೇಟ್ ಪೌಡರ್​ನಲ್ಲಿಟ್ಟು 200 ಗ್ರಾಂ ಚಿನ್ನದ ಸರವನ್ನು ದುಬೈಯಿಂದ ತಿರುಚಿನಾಪಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಪ್ರಯಾಣಿಕನಿಗೆ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

21 ಲಕ್ಷ ರೂ. ಮೌಲ್ಯದ ಚಿನ್ನವನ್ನು ಚಾಕೊಲೇಟ್ ಪೌಡರ್​ನಲ್ಲಿ‌‌ ಈತ ಇಟ್ಟಿದ್ದ ಎನ್ನಲಾಗಿದೆ.

ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಆಗಮಸಿದ ಪ್ರಯಾಣಿಕರ ಬ್ಯಾಗ್​ಗಳನ್ನು ಕಸ್ಟಮ್ಸ್​ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದರು.ಈ ವೇಳೆ ಚಾಕೆಲೆಟ್ ಪೌಡರ್ ನಲ್ಲಿ ಚಿನ್ನ ಪತ್ತೆಯಾಗಿದೆ.

ಇದೀಗ ಕಸ್ಟಮ್​ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್