ಬಾಗಲಕೋಟೆ:ಹೋಳಿ ಹಬ್ಬದ ಹಿನ್ನೆಲೆ ಹಲಗೆ ಬಾರಿಸುವ ವಿಚಾರಕ್ಕೆ ಗಲಾಟೆ ನಡೆದು ಯುವಕನಿಗೆ ಚೂರಿಯಂದ ಇರಿದು ಕೊಲೆ ಮಾಡಿರುವ ಘಟನೆ ಮುಧೋಳ ನಗರದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
ಮುಧೋಳ ನಗರದ ಟೀಚರ್ಸ್ ಕಾಲೊನಿಯಲ್ಲಿ ಗಿರೀಶ್ ಪಾಲೋಜಿ(22) ಕೊಲೆಯಾದ ಯುವಕ.
ಕಾರ್ತಿಕ ಕಾಂಬಳೆ, ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಕಾರ್ತಿಕ್ ಮಳಗಾವಿ, ಸುಚಿತ್ ಬಂಡಿವಡ್ಡರ್ ಕೊಲೆ ಆರೋಪಿಗಳು.
ಮಂಗಳವಾರ ರಾತ್ರಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾಂಬಳೆ ಮತ್ತು ಸ್ನೇಹಿತರು ರಸ್ತೆಯಲ್ಲಿ ಹೋಳಿ ಹಲಗೆ ಬಾರಿಸುತ್ತಾ ಸಾಗಿದ್ದರು.ಈ ವೇಳೆ ಗಿರೀಶ್ ಸ್ವಲ್ಪ ಮುಂದೆ ಹೋಗಿ ಬಾರಿಸಿ ಎಂದು ಹೇಳಿದ್ದ. ಇದಕ್ಕೆ ಜಗಳ ನಡೆದು ದುಷ್ಕರ್ಮಿಗಳು ಗಿರೀಶ್ ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿ ಮುಧೋಳ ಪೊಲೀಸರು ಸದ್ಯಕ್ಕೆ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.