ಗಾಝಾದಲ್ಲಿ ಮಕ್ಕಳು, ಮಹಿಳೆಯರು ಸೇರಿ ಸಾವಿರಾರು ಮಂದಿಯ ಸಾಮೂಹಿಕ ಅಂತ್ಯ ಸಂಸ್ಕಾರ

ಇಸ್ರೇಲ್ ಯುದ್ಧ ಘೋಷಣೆ ಬಳಿಕ ತಾತ್ಕಾಲಿಕ ಕದನ ವಿರಾಮದವರೆಗೆ ಗಾಝಾದಲ್ಲಿ ಮೃತಪಟ್ಟವರ ಸಂಖ್ಯೆ 14,854ಕ್ಕೆ ಏರಿದೆ. ಇದರಲ್ಲಿ 5,850 ಮಕ್ಕಳು ಸೇರಿದ್ದಾರೆ ಎಂದು ಗಾಝಾಪಟ್ಟಿಯಲ್ಲಿರುವ ಹಮಾಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ದಾಳಿಯಲ್ಲಿ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಇತ್ತೀಚೆಗೆ ಗಾಝಾದ ಅಲ್ ಸಿಫಾ ಆಸ್ಪತ್ರೆಯ ಆವರಣದಲ್ಲೇ 250ಕ್ಕೂ ಅಧಿಕ ಜನರನ್ನು ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದರಲ್ಲಿ ಮಕ್ಕಳು,ನವಜಾತ ಶಿಶುಗಳು ಸೇರಿದ್ದರು.

ಗಾಝಾ ಪಟ್ಟಿಯಲ್ಲಿ ಉಂಟಾದ ಸಾವಿನ ಬಗ್ಗೆ ನಿಖರ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಇತ್ತೀಚಿನ ಮಾಹಿತಿಯಂತೆ ಗಾಝಾದಲ್ಲಿ ಸಂವಹನಕ್ಕೆ ಅಡ್ಡಿಯುಂಟಾಗಿದ್ದು, ನಿಖರವಾದ ಡೇಟಾ ಸಂಗ್ರಹಣೆಗೆ ತೊಂದರೆಯಾಗಿದೆ ಎಂದು ವರದಿಯು ಹೇಳಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಕತಾರ್ ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಕುರಿತು ಮಾತುಕತೆ ನಡೆದಿತ್ತು. ಒತ್ತೆಯಾಳುಗಳ ಬಿಡುಗಡೆ, 4 ದಿನಗಳ ಕದನ ವಿರಾಮ, ಮಾನವೀಯ ನೆರವು ಕುರಿತು ಒಪ್ಪಂದ ಮಾಡಲಾಗಿತ್ತು.

ಟಾಪ್ ನ್ಯೂಸ್