ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ತರುವ ಡೆಲಿವರಿ ಬಾಯ್ ನಿಗದಿತ ಬೆಲೆಗಿಂತ ಹೆಚ್ಚುವರಿ ಹಣವನ್ನು ಕೇಳುತ್ತಿದ್ದಾನೆಯೇ?-HPCL ಹೇಳುವುದೇನು?

ನವದೆಹಲಿ;ಗ್ಯಾಸ್ ಸಿಲಿಂಡರ್ ಮನೆಗೆ ತರುವ ಸಿಲಿಂಡರ್ ಬಾಯ್ ಗೆ ಗ್ಯಾಸ್ ಗೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚುವರಿಯಾಗಿ ಹಣವನ್ನು ನೀಡಬಾರದು ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹೇಳಿದೆ.

ಈ ಬಗ್ಗೆ ಎಚ್ ಪಿಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಿ.ಕೆ.ನರಸಿಂಹ ಸ್ಪಷ್ಟಪಡಿಸಿದ್ದು, ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಖರೀದಿಸುವಾಗ 30 ರೂಪಾಯಿ ಅಥವಾ 50 ರೂಪಾಯಿ ಹೆಚ್ಚುವರಿ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ವಿತರಕರು ಗ್ಯಾಸ್ ಸಿಲಿಂಡರನ್ನು ಗ್ರಾಹಕರ ಮನೆಗೆ ತಲುಪಿಸಬೇಕು.ಇನ್ನು ಅವರು ಪಾವತಿಸುವ ಬಿಲ್ ನಲ್ಲಿ ವೆಚ್ಚವನ್ನು ಸೇರಿಸಲಾಗುತ್ತದೆ.ಡೆಲಿವರಿ ಬಾಯ್ ಗಳಿಗೆ ಹೆಚ್ಚುವರಿ ಹಣ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

ವ್ಯಕ್ತಿಯೋರ್ವರು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ಮಾಹಿತಿಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.

ಟಾಪ್ ನ್ಯೂಸ್