ಮೋದಿ ಕಳೆದ ವಾರ ಉದ್ಘಾಟಿಸಿದ್ದ ಐಶಾರಾಮಿ ಹಡಗು ಬಿಹಾರದಲ್ಲೇ ಬಾಕಿ!

ಛಾಪ್ರಾ:ಬಿಹಾರದ ಛಾಪ್ರಾದಲ್ಲಿ ಸೋಮವಾರ ಹೊಸದಾಗಿ ಬಿಡುಗಡೆಯಾದ ಗಂಗಾ ವಿಲಾಸ್ ಕ್ರೂಸ್ ನೌಕೆಯು ಆಳವಿಲ್ಲದ ನೀರಿನಲ್ಲಿ ಬಾಕಿಯಾಗಿದೆ.

ಕ್ರೂಸ್ ಚಾಪ್ರಾಕ್ಕೆ ಬಂದಾಗ, ಅದು ಆಳವಿಲ್ಲದ ನೀರಿನಲ್ಲಿ ಬಾಕಿಯಾಗಿದೆ.ನೀರಿನ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ಪುರಾತತ್ವ ತಾಣವಾದ ಚಿರಾಂದ್‌ಗೆ ಪ್ರವಾಸಿಗರಿಗೆ ಭೇಟಿ ನೀಡಲು ದಡದಲ್ಲಿ ನೌಕಾಯಾನ ಮಾಡಲು ನಿರ್ಧರಿಸಲಾಗಿತ್ತು.

ದೋರಿಗಂಜ್ ಬಜಾರ್ ಪ್ರಮುಖ ಪುರಾತತ್ವ ಸ್ಥಳವಾಗಿದೆ. ಆದರೆ, ದಡದಲ್ಲಿ ನೀರಿಲ್ಲದ ಕಾರಣ ಹಡಗನ್ನು ದಡಕ್ಕೆ ತರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಎಸ್‌ಡಿಆರ್‌ಎಫ್ ತಂಡವು ಚಿಕ್ಕ ದೋಣಿಯ ಮೂಲಕ ಪ್ರವಾಸಿಗರನ್ನು ರಕ್ಷಿಸಿದೆ. ಚಿರಾಂದ್‌ನಲ್ಲಿ ಪ್ರವಾಸಿಗರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಛಪ್ರಾದ ಸಿಒ ಸತೇಂದ್ರ ಸಿಂಗ್ ಹೇಳಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಐಶಾರಾಮಿ ಗಂಗಾ ವಿಲಾಸ್ ಕ್ರೂಸ್ ನ್ನು ಉದ್ಘಾಟಿಸಿದ್ದರು.

ಟಾಪ್ ನ್ಯೂಸ್