ಗಣೇಶ ಚತುರ್ಥಿ ಮೆರವಣಿಗೆ ವೇಳೆ ಘರ್ಷಣೆ, ಕಲ್ಲು ತೂರಾಟ, ಮಸೀದಿ ಗೇಟ್ ಗೆ ಹಾನಿ

ಗುಜರಾತ್‌;ವಡೋದರಾದಲ್ಲಿ ರಾತ್ರಿ ಗಣೇಶ ಚತುರ್ಥಿ ಮೆರವಣಿಗೆ ವೇಳೆ ಘರ್ಷಣೆ ನಡೆದಿದ್ದು ಪೊಲೀಸರು 13 ಜನರನ್ನು ಬಂಧಿಸಿದ್ದಾರೆ.30 ಮಂದಿ‌ ಮೇಲೆ ಕೇಸ್ ದಾಖಲಿಸಿದ್ದಾರೆ.

ವಡೋದರಾ ಕೋಮು‌ಸೂಕ್ಷ್ಮ ಪ್ರದೇಶ ಪಾನಿಗೇಟ್ ಧರ್ವಾಜಾ ಬಳಿ ಗಣೇಶ ಮೂರ್ತಿಯನ್ನು ಹೊತ್ತ ಮೆರವಣಿಗೆ ಸಾಗುವಾಗ ಎರಡು ಸಮುದಾಯಗಳ ನಡುವೆ
ಕಲ್ಲು ತೂರಾಟ ನಡೆದಿದೆ.

ಗಲಭೆ ಮತ್ತು ಕಾನೂನುಬಾಹಿರ ಸಭೆ ಆರೋಪದ ಮೇಲೆ ಎರಡು ಸಮುದಾಯದವರ ವಿರುದ್ಧ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆಯು ಮಾಂಡವಿ ಪ್ರದೇಶದ ಪಾಣಿಗೇಟ್ ದರ್ವಾಜಾ ಮೂಲಕ ರಾತ್ರಿ 11.15 ರ ಸುಮಾರಿಗೆ ಹಾದು ಹೋಗುತ್ತಿತ್ತು.ಈ ಸಮಯದಲ್ಲಿ ಎರಡೂ ಸಮುದಾಯದ ಜನರು ಪರಸ್ಪರ ಜಗಳವಾಡಲು ಪ್ರಾರಂಭಿಸಿದರು. ಈ ಗಲಾಟೆಯಲ್ಲಿ ಮಸೀದಿಯ ಮುಖ್ಯ ಗೇಟ್‌ನ ಗಾಜಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಣಿಗೇಟ್ ಪ್ರದೇಶದಲ್ಲಿ ಪೊಲೀಸ್ ಬಿಗಿಬಂದೋಬಸ್ತ್‌ ಅನ್ನು ಹೆಚ್ಚಿಸಲಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಗಸ್ತು ನಡೆಸಲಾಗುತ್ತಿದೆ.ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಶಾಂತಿಯುತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಟಾಪ್ ನ್ಯೂಸ್