ಹಾಸನ:ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಗಣರಾಜ್ಯೋತ್ಸವಸ ದಿನದಂದು ಉದ್ಘಾಟಿಸಲೆಂದು ಸಿದ್ದ ಪಡಿಸಿದ ಗಾಂಧಿಯ ಪ್ರತಿಮೆ ಇದೀಗ ಭಾರೀ ಆಕ್ಷೇಪಕ್ಕೆ ಕಾರಣವಾಗಿದೆ.
ಮಹಾತ್ಮಾ ಗಾಂಧಿ ಅವರ ದೇಹದ ಆಕರವನ್ನು ಕಳಪೆಯಾಗಿ ರೂಪಿಸಿರುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬ ಹಲವು ಹಿರಿಯ ಕಲಾವಿದರು ಆಕ್ಷೇಪಗಳನ್ನು ವ್ಯಕ್ತಪಡಿಸಿರುವ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆ ವರದಿ ಮಾಡಿದೆ.
ಹಾಸನವೂ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗಾಂಧಿ ಭವನಗಳನ್ನು ನಿರ್ಮಿಸಲು ವಾರ್ತಾ ಮತ್ತು ಪ್ರಸಾರ ಇಲಾಖೆ ಮುಂದಾಗಿದೆ.ಭವನಗಳ ಮುಂದೆ ನಿಲ್ಲಿಸುವ ಪ್ರತಿಮೆ, ಶಿಲ್ಪಗಳಿಗಾಗಿ ಇಲಾಖೆಯು 3 ಕೋಟಿ ವೆಚ್ಚ ಮಾಡಿದೆ.
ನಾವು ಮಹಾತ್ಮಾ ಗಾಂಧಿ ಅವರ ಸಾವಿರಾರು ಫೋಟೊಗಳನ್ನು ನೋಡಿದ್ದೇವೆ. ಗಾಂಧಿ ಒಬ್ಬ ಜನಪ್ರಿಯ ನಾಯಕ.ಅವರನ್ನು ಈ ಪ್ರತಿಮೆಯ ರೂಪದಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ ಎಂದು ವಿಜಯಪುರದ ಹಿರಿಯ ಕಲಾವಿದ ಪಿ.ಎಸ್.ಕಡೆಮನಿ ಅವರು ಹೇಳಿಕೆ ನೀಡಿರುವ ಬಗ್ಗೆ ‘ದಿ ಹಿಂದೂ’ ವರದಿ ಮಾಡಿದೆ.