ಮಂಗಳೂರು:ಚುನಾವಣೆ ಹಿನ್ನೆಲೆ ದ.ಕ.ಜಿಲ್ಲೆಯಿಂದ 11 ಮಂದಿಗೆ 6 ತಿಂಗಳ ಕಾಲ ಗಡಿಪಾರುಗೊಳಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ 6 ಪೊಲೀಸ್ ಠಾಣಾ ವ್ಯಾಪ್ತಿಯ 11 ಮಂದಿಗೆ ಮಾ.6ರಿಂದ ಸೆಪ್ಟಂಬರ್ 6ರವರೆಗೆ ಗಡಿಪಾರು ಮಾಡಲಾಗಿದೆ.
ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಗೋಳ್ತಮಜಲು ಗ್ರಾಮದ ನಝೀರ್,ಬಾಳ್ತಿಲ ಗ್ರಾಮದ ಇಬ್ರಾಹೀಂ ಖಲೀಲ್, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗನ್ನೂರು ಗ್ರಾಮದ ಜಯರಾಜ್ ರೈ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮದ ನೆಹರೂ ನಗರದ ಇಬ್ರಾಹೀಂ, ಕೆಮ್ಮಿಂಜೆ ಗ್ರಾಮದ ಹಕೀಂ ಕೂರ್ನಡ್ಕ, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ಮಾರು ಗ್ರಾಮದ ರೋಶನ್, ಸವಣೂರು ಗ್ರಾಮದ ಪ್ರಸಾದ್,ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಸಿದ್ದೀಕ್, ಉಪ್ಪಿನಂಗಡಿ ಗ್ರಾಮದ ಉಮೈದ್, ತಸ್ಲೀಂ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಶಿಲ ಗ್ರಾಮದ ಕಿರಣ್ ಕುಮಾರ್ ಡಿ. ಅವರನ್ನು ಗಡಿಪಾರು ಮಾಡಿ ಡಿಸಿ ಆದೇಶಿಸಿದ್ದಾರೆ.