ಬೈಕ್ ನಲ್ಲಿ ತೆರಳುತ್ತಿದ್ದವನ ಅಡ್ಡಗಟ್ಟಿ ರುಂಡ ಕತ್ತರಿಸಿದ ದುಷ್ಕರ್ಮಿಗಳು; ಬೆಚ್ಚಿಬೀಳಿಸುವ ಘಟನೆ

ಬೈಕ್ ನಲ್ಲಿ ತೆರಳುತ್ತಿದ್ದವನ ಅಡ್ಡಗಟ್ಟಿ ರುಂಡ ಕತ್ತರಿಸಿದ ದುಷ್ಕರ್ಮಿಗಳು;ಬೆಚ್ಚಿಬೀಳಿಸುವ ಘಟನೆ

ಬೆಳಗಾವಿ:ಬೈಕ್ ನಲ್ಲಿ ತೆರಳುತ್ತಿದ್ದಂತ ವ್ಯಕ್ತಿಯನ್ನು ಅಡ್ಡಗಟ್ಟಿ ರುಂಡವನ್ನು ಕತ್ತರಿಸಿ ವ್ಯಕ್ತಿಯೋರ್ವನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ತಾರಿಹಾಳ್ ಕ್ರಾಸ್ ಬಳಿಯಲ್ಲಿ ನಡೆದಿದೆ.

ಮುನವಳ್ಳಿ ಬಳಿಯಲ್ಲಿ ಬೈಕ್ ಮೇಲೆ ಗದಗಯ್ಯ ಹಿರೇಮಠ(40) ಎಂಬವರು ಹೋಗುತ್ತಿದ್ದರು.ಅವರನ್ನು ತಾರಿಹಾಳ ಕ್ರಾಸ್ ಬಳಿಯಲ್ಲಿ ತಡೆದಿರುವಂತ ದುಷ್ಕರ್ಮಿಗಳು, ಅವರ ರುಂಡವನ್ನು ಕತ್ತರಿಸಿದ್ದಾರೆ.

ಬೈಕ್ ಮೇಲೆ ರುಂಡ ಕತ್ತರಿಸಿದಂತ ಮೃತ ದೇಹವನ್ನು ಕಂಡಂತ ಜನರು,ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಆಗಮಿಸಿ,ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್