ಟರ್ಕಿ ಪ್ರಬಲ ಭೂಕಂಪನಕ್ಕೆ ಅವಶೇಷಗಳಡಿ ಸಿಲುಕಿಕೊಂಡ ಖ್ಯಾತ ಪುಟ್ಬಾಲ್ ಆಟಗಾರ

ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪಕ್ಕೆ 5,000 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.11,000 ಕಟ್ಟಡಗಳಿಗೆ ಹಾನಿಯಾಗಿ ಟರ್ಕಿ- ಸಿರಿಯಾ ನೆಲ ಅಕ್ಷರಶಃ ಸ್ಮಶಾನದಂತಾಗಿದೆ.

ಭೂಕಂಪನ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಭೂಕಂಪದ ಅವಶೇಷಗಳಡಿ ಘಾನಾ ವಿಂಗರ್ ಕ್ರಿಶ್ಚಿಯನ್ ಅಟ್ಸು ಸಿಲುಕಿಕೊಂಡಿದ್ದಾರೆ ಎಂದು ಕ್ರಿಶ್ಚಿಯನ್ ಅಟ್ಸು ಅವರು ಪ್ರತಿನಿಧಿಸುತ್ತಿರುವ ಟರ್ಕಿಶ್ ಕ್ಲಬ್ ಹಯಾಟ್ಸ್‌ಪೋರ್‌ನ ಉಪಾಧ್ಯಕ್ಷರು ಹೇಳಿದ್ದಾರೆ.

ಮಾಜಿ ನ್ಯೂ ಕ್ಯಾಸಲ್ ಹಾಗೂ ಚೆಲ್ಸಿಯಾ ಮಿಡ್‌ಫೀಲ್ಡರ್ ಅಟ್ಸು(31) ಸೆಪ್ಟೆಂಬರ್‌ನಲ್ಲಿ ಸೂಪರ್ ಲಿಗ್ ತಂಡವನ್ನು ಸೇರಿಕೊಂಡಿದ್ದರು.ಅಟ್ಸು ಅವರ ಕ್ರೀಡಾ ನಿರ್ದೇಶಕರಾದ ಟಾನರ್ ಸಾವುತ್ ಕೂಡ ಕುಸಿದುಬಿದ್ದಿರುವ ಕಟ್ಟಡದ ಅವಶೇಷಗಳಡಿ ಇದ್ದಾರೆಂದು ಹೇಳಲಾಗಿದೆ.

ಟಾನರ್ ಸಾವುತ್ ಮತ್ತು ಕ್ರಿಶ್ಚಿಯನ್ ಅಟ್ಸು ಇನ್ನೂ ಅವಶೇಷಗಳಡಿ ಸಿಲುಕಿದ್ದಾರೆಂದು ಮುಸ್ತಫಾ ಓಜಾಟ್ ಹೇಳಿದ್ದಾರೆ.

ಕ್ಲಬ್ ಅಧಿಕಾರಿಗಳಿಗೆ ಈ ಇಬ್ಬರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಕ್ಲಬ್ ಡೈರೆಕ್ಟರ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com