ಕಳೆನಾಶಕ ಸಿಂಪಡನೆ ಬಳಿಕ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ ದುರ್ಮರಣ

ಹುಬ್ಬಳ್ಳಿ:ಕಳೆನಾಶಕ ಸಿಂಪಡನೆ ಬಳಿಕ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಯಲ್ಲಿ ಕುಮಟಾ ತಾಲೂಕಿನ ಬಾಡ ಗ್ರಾಮದ ನಿವಾಸಿ ಯೋಗೇಶ್ ನಾಯಕ್ ಮೃತಪಟ್ಟಿದ್ದಾರೆ.

ಯೋಗೇಶ್ ನಾಯಕ್ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಜೂನ್ 27 ರಂದು ಸಾಗವಾನಿ ಸಸಿಗಳ ಕಳೆಯನ್ನು ನಾಶಪಡಿಸಲು ಹಾಗೂ ಭೂಮಿ ಒಳಗಡೆ ಇರುವ ಹುಳಹುಪ್ಪಡಿಗಳನ್ನು ಸಾಯಿಸಲು ಯೋಗೇಶ ನಾಯಕ್ ಪ್ಯಾರಾಗ್ಯೂಟ್ ಎಂಬ ವಿಷಪೂರಿತ ಕೀಟ ನಾಶಕವನ್ನು ಸಿಂಪಡಿಸಿದ್ದರು.ಬಳಿಕ ಕೈ ತೊಳೆಯದೆ ಊಟ, ನೀರು ಸೇವಿಸಿದ್ದಾರೆ ಎನ್ನಲಾಗಿದೆ.

ಬಳಿಕ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಹುಬ್ಬಳ್ಳಿಯ ಎಸ್​ಡಿಎಂಗೆ ದಾಖಲಾಗಿದ್ದರು.

ಅಲ್ಲಿ ಪರೀಕ್ಷೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್​​ಗಳು ಡ್ಯಾಮೇಜ್ ಆಗಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ವೇಳೆಗೆ ಯೋಗೇಶ್ ನಾಯ್ಕ್ ಕೋಮಾ ಸ್ಥಿತಿಗೆ ತಲುಪಿದ್ದರು.ಅಲ್ಲೂ ಕೂಡ ಚಿಕಿತ್ಸೆಗೆ ಸ್ಪಂಧಿಸದ ಕಾರಣ ಹುಬ್ಬಳ್ಳಿಯ ಕಿಮ್ಸ್​​ಗೆ ಶಿಪ್ಟ್ ಆಗಿದ್ದರು.

ಟಾಪ್ ನ್ಯೂಸ್