ಫ್ಲೈಓವರ್ ಮೇಲೆ ವೇಗವಾಗಿ ಬಂದ ಬೈಕ್ ಡಿವೈಡರ್​​ಗೆ ಡಿಕ್ಕಿ ಹೊಡೆದು ಅಪಘಾತ; ಓರ್ವ ಯುವಕ ಮೃತ್ಯು, ಇನ್ನೋರ್ವ ಗಂಭೀರ

ಬೆಂಗಳೂರು;ಫ್ಲೈಓವರ್ ಮೇಲೆ ವೇಗವಾಗಿ ಬಂದ ಬೈಕ್ ಡಿವೈಡರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಿ 30 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ
ಪದ್ಮನಾಭನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಹಿಂಬದಿ ಸವಾರ ಹಾಫ್​ ಹೆಲ್ಮೆಟ್​ ಹಾಕಿದ್ದನು ಎನ್ನಲಾಗಿದೆ.

ರಾಮ್​ಕುಮಾರ್ ಮೃತರು.ಯಶವಂತ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ವೀಕೆಂಡ್ ಹಿನ್ನೆಲೆ ನಿನ್ನೆ ರಾಮ್​ಕುಮಾರ್ ಮತ್ತು ಯಶವಂತ್ ಬೈಕ್​ ರೈಡ್​ಗಾಗಿ ಬಂದಿದ್ದರು ಎನ್ನಲಾಗಿದೆ.ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಾಪ್ ನ್ಯೂಸ್