ಮುಖಕ್ಕೆ ರಟ್ಟಿನ ಬಾಕ್ಸ್ ಹಾಕಿಕೊಂಡು ಬಂದು ಅಂಗಡಿಯಲ್ಲಿ ಕಳ್ಳತನ ನಡೆಸಿದ ಕಳ್ಳ; ವಿಡಿಯೋ ವೈರಲ್..

ಮುಖಕ್ಕೆ ರಟ್ಟಿನ ಬಾಕ್ಸ್ ಹಾಕಿಕೊಂಡು ಬಂದು ಅಂಗಡಿಯಲ್ಲಿ ಕಳ್ಳತನ ನಡೆಸಿದ ಕಳ್ಳ; ವಿಡಿಯೋ ವೈರಲ್..

ಅಮೆರಿಕದ ಫ್ಲೋರಿಡಾದ ಅಂಗಡಿಯೊಂದರಲ್ಲಿ ನಡೆದ ಕಳ್ಳತನದ ದೃಶ್ಯ ಇದೀಗ ಭಾರೀ ವೈರಲ್ ಆಗಿದೆ.

ಮಿಯಾಮಿ ಗಾರ್ಡನ್ಸ್ ನಲ್ಲಿರುವ ಫೋನ್ ರಿಪೇರಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ.ಕಳ್ಳ ತನ್ನ ಮುಖವನ್ನು ಮರೆಮಾಚಲು ರಟ್ಟಿನ ಪೆಟ್ಟಿಗೆಯನ್ನು ಧರಿಸಿ ಅಂಗಡಿಯೊಳಕ್ಕೆ ನುಗ್ಗಿದ್ದಾನೆ.

ಅಪರಿಚಿತ ವ್ಯಕ್ತಿ ಗಾಜಿನ ಡಿಸ್ಪ್ಲೇಗಳನ್ನು ಒಡೆದು ಹಾಕಿ ಬೇಗ ಬೇಗ ಐಫೋನ್ ಗಳನ್ನು ತುಂಬಿಸಿಕೊಳ್ಳುತ್ತಾನೆ. ರಟ್ಟಿನ ಬಾಕ್ಸ್ ನಿಂದ ತನ್ನ ಮುಖ ಮರೆಮಾಡಿ ಈ ಕೃತ್ಯವೆಸಗುತ್ತಾನೆ. ಆದರೆ ಆತ ಗಡಿಬಿಡಿಗೆ ಮುಖದ ಮೇಲಿದ್ದ ರಟ್ಟಿನ ಬಾಕ್ಸನ್ನು ಸ್ವಲ್ಪ ಹಿಂದೆ ಸರಿಸಿದಾಗ ಕ್ಯಾಮೆರಾದಲ್ಲಿ ಆತನ ಮುಖ ಚಹರೆ ಸೆರೆಸಿಕ್ಕಿದೆ.

ಈ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಅಂಗಡಿ ಮಾಲೀಕ ಹಂಚಿಕೊಂಡು ಕಳ್ಳನ ಪತ್ತೆಗೆ ಮನವಿ ಮಾಡಿದ್ದಾರೆ.ಕೊನೆಗೆ
ಕಳ್ಳ ತನ್ನ ಸ್ನೇಹಿತರೊಂದಿಗೆ ಹತ್ತಿರದ ಮದ್ಯದಂಗಡಿಯಲ್ಲಿದ್ದಾಗ ಮಿಯಾಮಿ ಗಾರ್ಡನ್ಸ್ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಈ ಕಳ್ಳತನದ ವಿಡಿಯೋ ಇದೀಗ ಅಂತರಾಷ್ಟ್ರೀಯ‌ ಮಟ್ಟದಲ್ಲಿ ಭಾರೀ ವೈರಲ್ ಆಗುತ್ತಿದೆ.ಕಳ್ಳ ಕಳ್ಳತನಕ್ಕೆ ಆಯ್ಕೆ ಮಾಡಿಕೊಂಡ ತಂತ್ರವನ್ನು ಕಂಡು ಜನ ಬೆರಗಾಗಿದ್ದಾರೆ.ಆದರೆ ಆತ ಮಾಡಿದ ಯಡವಟ್ಟಿನಿಂದ ಸಿಕ್ಕಿಬಿದ್ದು ಇದೀಗ ಜೈಲು ಪಾಲಾಗಿದ್ದಾ‌ನೆ.

ಟಾಪ್ ನ್ಯೂಸ್