ತುಮಕೂರು:ತುಮಕೂರಿನಲ್ಲಿ ಫಾಝಿಲ್ ಕೊಲೆಯನ್ನು ಉಲ್ಲೇಖಸಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ ಕೊಲೆಯನ್ನು ಸಮರ್ಥಿಸಿದ್ದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ತುಮಕೂರಿನಲ್ಲಿ ಕೇಸ್ ದಾಖಲಾಗಿದೆ.
ತುಮಕೂರಿನ ತಿಲಕ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೈಯದ್ ಬುರ್ಹಾನ್ ಉದ್ದೀನ್ ಎಂಬವರು ಶರಣ್ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರಿನಲ್ಲಿ ಶರಣ್, ಫಾಝಿಲ್ ಹತ್ಯೆಯನ್ನು ಸಮರ್ಥಿಸಿ ಹೇಳಿಕೆ ಬೆನ್ನಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಫಾಝಿಲ್ ತಂದೆ ಮಂಗಳೂರು ಕಮಿಷನರ್ ಗೆ ದೂರು ನೀಡಿದ್ದರು.ಆದರೆ ಪೊಲೀಸರು ಈವರೆಗೆ ಆತನಿಗೆ ಬಂಧಿಸಿ ತನಿಖೆ ನಡೆಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.