ಕರಾವಳಿಯ ಸೌಜನ್ಯ ಸ್ಟೋರಿ ಆಧಾರಿತ ಚಲನಚಿತ್ರ; ತೆರೆ ಮೇಲೆ ‘ಸ್ಟೋರಿ ಆಫ್ ಸೌಜನ್ಯ’!

ಕರಾವಳಿಯ ಸೌಜನ್ಯ ಸ್ಟೋರಿ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ.

ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದ್ದು, ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ಚಿತ್ರ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಥಾಹಂದವನ್ನು ಒಳಗೊಂಡಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಬರಲಿದೆ ಎನ್ನಲಾಗಿದೆ.

ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಕೇಸ್ 2012ರಲ್ಲಿ ನಡೆದಿದೆ.

ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ 11 ವರ್ಷಗಳ ಬಳಿಕ ನಿರ್ದೋಷಿ ಎಂದು ಈಗಾಗಲೇ ಸಿಬಿಐ ಕೋರ್ಟ್ ತೀರ್ಪು ನೀಡಿದೆ.ಸೌಜನ್ಯ ಮನೆಯವರೂ ಆತ ಕೊಲೆಗಾರನಲ್ಲ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆಯಾಗಿಲ್ಲ ಎಂಬುದು ಸೌಜನ್ಯ ಕುಟುಂಬಸ್ಥರ ಆರೋಪ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸೌಜನ್ಯ ಕುಟುಂಬ ಈಗಲೂ ಕೆಲವು ಸ್ಥಳೀಯ ಸಂಘಟನೆಗಳ ಸಹಾಯದೊಂದಿಗೆ ಹೋರಾಟ ನಡೆಸುತ್ತಿದೆ.

ಟಾಪ್ ನ್ಯೂಸ್