ಅರ್ಜೆಂಟೀನಾ ತಂಡ ಸೋಲು ಕಂಡಾಗ ಕೇರಳದ ಪುಟ್ಟ ಅಭಿಮಾನಿ ಕಣ್ಣೀರು ಹಾಕುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅದೇ ಅಭಿಮಾನಿಗೆ ಕತಾರ್ ಗೆ ತೆರಳಿ ಫಿಫಾ ಪಂದ್ಯವನ್ನು ನೋಡುವ ಅವಕಾಶ ಸಿಕ್ಕಿದೆ.
ಮೆಸ್ಸಿಯ ಅರ್ಜೆಂಟೀನಾ ತಂಡ ಸೌದಿಯ ಎದುರು ಸೋತ ಕಾರಣ ಕಾಸರಗೋಡಿನ 13 ವರ್ಷದ ಬಾಲಕ ನಿಬ್ರಾಸ್ ಕಣ್ಣೀರು ಹಾಕಿದ್ದ.ಈ ಕುರಿತ ವಿಡಿಯೋ ವೈರಲ್ ಆಗಿತ್ತು.
ಇದೀಗ ನಿಬ್ರಾಸ್ಗೆ ಪಯ್ಯನ್ನೂರ್ ಮೂಲದ ಸ್ಮಾರ್ಟ್ ಟ್ರಾವೆಲ್ ಏಜೆನ್ಸಿಯು ಬಾಲಕನಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದು,ಆತನ ನೆಚ್ಚಿನ ತಂಡದ ಆಟವನ್ನು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಿದೆ. ಜೊತೆಗೆ ಅರ್ಜೆಂಟೀನಾ ತಂಡದ ಎಲ್ಲ ಆಟಗಾರರ ಭೇಟಿ ಮಾಡಿಸಲೂ ಏಜೆನ್ಸಿ ಅವಕಾಶ ಮಾಡಿಕೊಟ್ಟಿದೆ.
ಈ ಬಗ್ಗೆ ಮಾತನಾಡಿದ ನಿಬ್ರಾಸ್, ನನ್ನ ಕನಸಿನ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಹತ್ತಿರದಿಂದ ಭೇಟಿಯಾಗುವ ಕನಸು ಈಡೇರುವ ಸಮಯ ಬಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾನೆ.