ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಅಬುಧಾಬಿಯ ಎಮಿರೇಟ್ಸ್ ಪ್ಯಾಲೇಸ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಮುಖ ಉದ್ಯಮಿ ಮತ್ತು ಲುಲು ಸಮೂಹದ ವ್ಯವಸ್ಥಾಪಕ ನಿರ್ದೇಶಕ ಎಂಎ ಯೂಸುಫ್ ಅಲಿ ಅವರ ಸೋಹದರನ ಪುತ್ರಿ ಡಾ.ಫಾಹಿಮಾ ಅಶ್ರಫ್ ಅಲಿ ವಿವಾಹ ನಡೆದಿದೆ.
ವಧುವಿನ ತಂದೆ ಅಶ್ರಫ್ ಅಲಿ ಎಂಎ, ಎಂಎ ಯೂಸುಫ್ ಅಲಿ ಅವರ ಕಿರಿಯ ಸಹೋದರ.
ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿದರು. ಮಲಯಾಳಂ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್, ಟೊವಿನೋ ಥಾಮಸ್, ಕುಂಜಾಕೊ ಬೋಬನ್, ಆಸಿಫ್ ಅಲಿ, ಜಯರಾಮ್ ದಿಲೀಪ್, ಕಾವ್ಯ ಮಾಧವನ್ ಮತ್ತು ಅಪರ್ಣಾ ಬಾಲಮುರಳಿ ಸೇರಿದಂತೆ 1,000 ಕ್ಕೂ ಹೆಚ್ಚು ಸ್ಟಾರ್-ಸ್ಟೇಟೆಡ್ ಅತಿಥಿಗಳು ಭಾಗವಹಿಸಿದ್ದರು.
ಮದುವೆಯು ಭವ್ಯವಾದ ಪೆಂಡೆಂಟ್‌ಗಳು ಮತ್ತು ಬೆಳಕಿನಿಂದ ಕಂಗೊಳಿಸಿದ, ಹೂವಿನಿಂದ ಶೃಂಗರಿಸಿದ ಭವ್ಯವಾದ ಅರಮನೆ ರೀತಿಯ ಪ್ಯಾಲೆಸ್ ನಲ್ಲಿ ನಡೆದಿದೆ.
ಡಾ ಫಾಹಿಮಾ ಅವರು ವಜ್ರದ ಆಭರಣಗಳನ್ನು ಮಾತ್ರ ಧರಿಸಿ, ಜಟಿಲವಾದ ಬೀಡ್‌ವರ್ಕ್‌ನೊಂದಿಗೆ ಬ್ಲಶ್ ಪಿಂಕ್, ಭಾರೀ-ಕಸೂತಿ ಲೆಹೆಂಗಾವನ್ನು (ಉದ್ದನೆಯ ಸಾಂಪ್ರದಾಯಿಕ ಸ್ಕರ್ಟ್) ಧರಿಸಿದ್ದರು.
ಆಕೆಯ ಪತಿ, ಮುಬೀನ್ ಮುಸ್ತಫಾ, ಪೇಟ ಮತ್ತು ಬೆಲ್ಟ್‌ನೊಂದಿಗೆ ಸಂಪೂರ್ಣವಾದ ಬೀಜ್ ಶೆರ್ವಾನಿ (ಉದ್ದದ ಕೋಟ್) ಧರಿಸಿದ್ದರು.
ನಾಲ್ಕು ದಿನಗಳ ಕಾಲ ನಡೆದ ವಿವಾಹ ಸಮಾರಂಭದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದಿದ್ದವು. ನೂರಾರು ಬಗೆಯ ಆಹಾರಗಳನ್ನು ಸಜ್ಜುಗೊಳಿಸಲಾಗಿತ್ತು.