ಮೂಗಿನಿಂದ ರಕ್ತ ಸೋರಿಕೆಯಾಗಿ ಜನರು ಸಾವು, ಆತಂಕ ಸೃಷ್ಟಿಸಿದ ನಿಗೂಢ ಕಾಯಿಲೆ

ನಿಗೂಢ ಕಾಯಿಲೆಗೆ ಈಕ್ವಟೋರಿಯಲ್ ಗಿನಿಯಾ ಜನರು ತತ್ತರಿಸಿದ್ದಾರೆ.ಈ ಕಾಯಿಲೆ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಠಾತ್ ಮೂಗಿನಿಂದ ರಕ್ತ ಸೋರುವಿಕೆ, ಅಧಿಕ ಜ್ವರ, ಕೀಲು ನೋವು ಮತ್ತು ಇತರ ಅಪಾಯಕಾರಿ ರೋಗಲಕ್ಷಣಗಳಿಂದ ಜನರು ಭಯಗೊಂಡಿದ್ದಾರೆ.

ಈಕ್ವಟೋರಿಯಲ್ ಗಿನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ರೋಗ ಪೀಡಿತ ಗ್ರಾಮಗಳನ್ನು ಲಾಕ್ ಡೌನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.200 ಜನರಿಗೆ ಕ್ವಾರೆಂಟೈನ್ ವಿಧಿಸಲಾಗಿದೆ. ಕ್ಯಾಮರೂನ್ ಮತ್ತು ಈಕ್ವಟೋರಿಯಲ್ ಗಿನಿಯಾ ಗಡಿಗಳಲ್ಲಿಯೂ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಸಹ ಈ ಕಾಯಿಲೆಯ ಬಗ್ಗೆ ಸಂಶೋಧನೆ ನಡೆಸುತ್ತಿದೆ.

ಟಾಪ್ ನ್ಯೂಸ್