ಮಂಗಳೂರು;ಫಾಝಿಲ್ ಹತ್ಯೆಯನ್ನು ಸಮರ್ಥಿಸಿ ಕೃತ್ಯವನ್ನು ಬೆಂಬಲಿಸಿ ಭಾಷಣ ಬಿಗಿದ ಶರಣ್ ಪಂಪ್ವೆಲ್ ವಿರುದ್ಧ ಕೊಲೆಯಾದ ಫಾಝಿಲ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಲೆಯ ಮೂಲ ಶರಣ್ ಪಂಪ್ ವೆಲ್ ಎಂದು ಗೊತ್ತಾಯಿತು, ಇದಕ್ಕಾಗಿ ಆತನ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಲು ಕಮಿಷನರ್ ಕಚೇರಿಗೆ ಬಂದಿದ್ದೇನೆ ಎಂದು ಫಾಝಿಲ್ ತಂದೆ ಹೇಳಿದ್ದಾರೆ.
ಸರಕಾರಕ್ಕೆ ಮಾನವೀಯತೆ ಇಲ್ಲ,ಇವರು ಏನು ಕ್ರಮ ಕೈಗೊಳ್ಳುವ ರೀತಿ ಕಾಣುವುದಿಲ್ಲ, ಕಮಿಷನರ್ ಕಾರಣ ಹೇಳುತ್ತಾರೆ, ಬೇರೆಯವರಲ್ಲಿ ಕೇಳಬೇಕು ಎನ್ನುತ್ತಾರೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಫಾಝಿಲ್ ತಂದೆ ಉಮರುಲ್ ಫಾರೂಕ್ ಹೇಳಿದ್ದಾರೆ.
ಹಿಂದೂಗಳು ಒಳ್ಳೆಯವರು ಅವರನ್ನು ಎಳೆದು ತರಬೇಡಿ ಹಿಂದುತ್ವ ಒಳ್ಳೇದಲ್ಲ, ಹಿಂದುತ್ವಕ್ಕೆ ಕೃತ್ಯ ನಡೆದಿದೆ.ವೋಟು ಬ್ಯಾಂಕ್ ರಾಜಕೀಯಕ್ಕೆ ಕೃತ್ಯ ನಡೆದಿದೆ ಎಂದು ಫಾರೂಕ್ ಹೇಳಿದ್ದಾರೆ.
7-8 ಜನ ಬಂದು ಒಬ್ಬನೇ ಇದ್ದ ಅಮಾಯಕ ಮಗನಿಗೆ ಗುಂಪಾಗಿ ಕೊಲೆ ಮಾಡಿದ್ದಾರೆ. ಇದನ್ನು ಶೌರ್ಯ ಎಂದು ತುಮಕೂರಿನಲ್ಲಿ ಹೇಳಿದ್ದಾರೆ.ಇದು ಶೌರ್ಯ ಅಲ್ಲ ಹೇಡಿಗಳ ಕೃತ್ಯ ಎಂದು ಹೇಳಿದ್ದಾರೆ.