ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

ಮಂಗಳೂರು;ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ‌‌ ಬಂದಿದ್ದು ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಹತ್ಯೆಯಾಗಿ ಪರಿಹಾರ ನಿರಾಕರಿಸಲ್ಪಟ್ಟ ಸುಳ್ಯದ ಮಸೂದ್ ಹಾಗೂ ಸುರತ್ಕಲ್ ನ ಫಾಝಿಲ್ ಗೆ ಪರಿಹಾರ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿ ಬಂದಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರಕಾರ ಗುತ್ತಿಗೆ ಆಧಾರದಲ್ಲಿ ನೇಮಿಸಿದ್ದ ಎಲ್ಲಾ ನೇಮಕಾತಿಗಳನ್ನು ರದ್ದುಪಡಿಸಿತ್ತು. ಇದೇ ವೇಳೆ ಕಳೆದ ಬಿಜೆಪಿ ಅವಧಿಯಲ್ಲಿ ಪುತ್ತೂರಿನಲ್ಲಿ ಕೊಲೆಯಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿ ಅವರು ಉದ್ಯೋಗ ಕಳೆದುಕೊಂಡಿದ್ದರು.ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಸಿಎಂ‌ ಸಿದ್ದರಾಮಯ್ಯ ಮರು ನೇಮಕ‌ ಮಾಡಿ ಮಾನವೀಯತೆಯ ನೆಲೆಯಲ್ಲಿ ಉದ್ಯೋಗ ಕಲ್ಪಿಸುವುದಾಗಿ ಹೇಳಿದ್ದಾರೆ.ಇದು ಸಿದ್ದರಾಮಯ್ಯ ಸರಕಾರ ಮಾಡಿರುವ ಮಾನವೀಯ ಕೆಲಸವೇ ಸರಿಯಾಗಿದೆ.

ಕಳೆದ ಬಿಜೆಪಿ ಅವಧಿಯಲ್ಲಿ ಕರಾವಳಿಯಲ್ಲಿ ನಡೆದ ಮೂವರು ಯುವಕರ ಹತ್ಯೆಯಲ್ಲಿ ಪ್ರವೀಣ್ ನೆಟ್ಡಾರು ಕುಟುಂಬವನ್ನು ಮಾತ್ರ ವಿಶೇಷವಾಗಿ ಕಂಡು ಬಿಜೆಪಿ ಸರಕಾರ
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಹಾಗೂ ಬಿಜೆಪಿ ಪಕ್ಷದಿಂದ 25 ಲಕ್ಷ ಸೇರಿ ಒಟ್ಟು 50 ಲಕ್ಷ ರೂ. ಪರಿಹಾರವನ್ನು ಅಂದಿನ ಸಿಎಂ ಬೊಮ್ಮಯಿ ಕೊಟ್ಟಿದ್ದರು.ಮನೆಯನ್ನು ಕೂಡ ನಿರ್ಮಿಸಿಕೊಟ್ಟಿದ್ದರು. ಆದರೆ ಅದೇ ಸಮಯದಲ್ಲಿ ಕೊಲೆಯಾದ ಫಾಝಿಲ್ ಮತ್ತು ಮಸೂದ್ ಕುಟುಂಬಕ್ಕೆ ಸಹಾಯ ಮಾಡದೆ ರಾಜ ಮರ್ಯಾದೆ ಮರೆತು ಅಸಮಾನತೆ ಮೆರೆದಿದ್ದರು.

ಸತ್ತವರ ಮನೆಗೆ ದೊಡ್ಡವರು ಬಂದು ಸಾಂತ್ವನ ಹೇಳುವುದನ್ನು ಎಲ್ಲ ಕಡೆ ನೋಡುತ್ತಿದ್ದೇವೆ. ಆದರೆ, ಮಗನನ್ನು ಕಳೆದುಕೊಂಡ ನಮಗೆ ಸಾಂತ್ವನ ಹೇಳುವವರು ಯಾರೂ ಇಲ್ಲ. ನಮಗೂ ನ್ಯಾಯ ಸಿಗುವುದು ಬೇಡವೇ? ಮಸೂದು ತಾಯಿ ಸಾರಮ್ಮ ಹಾಗೂ‌ ಸಹೋದರ ಮಿರ್ಷಾದ್ ಹೇಳಿದ್ದರು.ಇದೇ ಕಥೆ ಸುರತ್ಕಲ್ ಫಾಝಿಲ್ ಕುಟುಂಬದ್ದು ಕೂಡ ಆಗಿತ್ತು. ಸರಕಾರ ನಡುರಸ್ತೆಯಲ್ಲಿ ಹತ್ಯೆಯಾಗಿದ್ದ ಫಾಝಿಲ್ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ.ಜೊತೆಗೆ ಹತ್ಯೆ ಆರೋಪಿಯೋರ್ವನಿಗೆ ಬಂಧನದ ಒಂದೇ ತಿಂಗಳೊಳಗೆ ಜಾಮೀನು ಕೂಡ ನೀಡಲಾಗಿತ್ತು.

ಕರಾವಳಿಯಲ್ಲಿ ನಡೆದ ಹತ್ಯೆಯಲ್ಲಿ ಅಸಮಾನತೆಯಲ್ಲಿ ಕಂಡಿದ್ದ ಬೊಮ್ಮಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀವು ಮಾಡಿರುವುದು ತಪ್ಪು ಎಂದು ಚುನಾವಣೆಯಲ್ಲಿ ರಾಜ್ಯದ ಜನತೆ ಉತ್ತರ ಕೊಟ್ಟಿದ್ದಾರೆ.ರಾಜ್ಯದಲ್ಲಿ ಹೊಸದಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ.ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರಕಾರ ಕೊಲೆಯಾದ ಫಾಝಿಲ್ ಕುಟುಂಬಕ್ಕೆ ಮತ್ತು‌ ಮಸೂದ್ ಕುಟುಂಬಕ್ಕೆ ಪರಿಹಾರವನ್ಜು ಕೊಟ್ಟು ಸಮಾನತೆಯನ್ನು ಕಾಯ್ದುಕೊಳ್ಳಬೇಕುಬೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಕೇಳಿ ಬಂದಿದೆ.ಈ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿರದೆ ಮಾತನಾಡಬೇಕು ಎಂದು ನೆಟ್ಡಿಗರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್