ಮಗನ ಸಾವಿನ ತನಿಖೆಯಲ್ಲಿ ಅನ್ಯಾಯವಾಗಿದೆ ಎಂದು ದುಃಖ ವ್ಯಕ್ತಪಡಿಸಿದ ಫಾಝಿಲ್ ತಂದೆ

ಸುರತ್ಕಲ್;ಫಾಝಿಲ್ ಹತ್ಯೆಗೆ ಪೊಲೀಸರು ತೋರ್ಪಡಿಕೆಗೆ ಮಾತ್ರ ಸಿಸಿಟಿವಿಯಲ್ಲಿ ಇರುವ ಆರೋಪಿಗಳನ್ನು ಬಂಧಿಸಿದ್ದಾರೆ‌. ಆದರೆ ಕೃತ್ಯದ ಹಿಂದಿನ ಆರೋಪಿಗಳ ಬಂಧನ ಆಗಿಲ್ಲ ಎಂದು ಫಾಝಿಲ್ ತಂದೆ ಫಾರೂಕ್ ಕಣ್ಣೀರು ಹಾಕಿದ್ದು,ನನ್ನ ಮಗನಿಗೆ ಬಂದ ಸ್ಥಿತಿ ಇನ್ಯಾರಿಗೂ ಬರಬಾರದು,ಇವರನ್ನು ಶಿಕ್ಷಿಸದೆ ಬಿಟ್ಟರೆ ಮತ್ತೆ ಇಂತದ್ದೇ ಕೃತ್ಯ ನಡೆಯುತ್ತದೆ ಎಂದು ಹೇಳಿದ್ದಾರೆ.

ಸುರತ್ಕಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮತನಾಡಿದ ಫಾರೂಕ್ ಅವರು, 27 ವರ್ಷಗಳ ಹಿಂದಿನ ಕಾರಿನಲ್ಲಿ 7 ಆರೋಪಿಗಳು ಪರಾರಿಯಾಗಲು ಸಾಧ್ಯನಾ? ಇದ್ರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎಂದು ಮೃತ ಫಾಝೀಲ್ ತಂದೆ ಆರೋಪಿಸಿದ್ದಾರೆ.

ಕೃತ್ಯಕ್ಕೆ ಸಹಕಾರ ಮಾಡಿದ ಪಲ್ಲಮಜಲು ನಿವಾಸಿ ಬಂಧನ ಮಾಡಲಾಗಿದೆ.ಇಲ್ಲಿ ಆತನಿಗೆ ಚಾ ಕುಡಿಯಲು ಯಾರಾದ್ರೂ ಹಣ ನೀಡಬೇಕು ಹಾಗಿದ್ದಾನೆ. ಅಂತವನಿಂದ ಕೃತ್ಯಕ್ಕೆ ಹಣ ಸಹಾಯ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಇಲ್ಲಿನ ಅಧಿಕಾರಿಗಳು ಸರಿಯಾಗಿದ್ದಾರೆ.ರಾಜಕೀಯದವರು ಅವರ ಕೈ ಕಟ್ಟಿ ಹಾಕಿದ್ದಾರೆ.ಈ ಕೃತ್ಯದ ಹಿಂದೆ ಕಾಣದ ಕೈಗಳ ಸಹಕಾರ ಇದೆ.ಅವರನ್ನು‌ ಬಂಧಿಸಿಲ್ಲ‌ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಮೂರು ವಾಹನಗಳ ಮಾಲೀಕರು ಯಾರೂ ಎಂಬುದನ್ನು ಬಹಿರಂಗಪಡಿಸಿಲ್ಲ,ಆಯುಧಗಳನ್ನು ಪೂರೈಸಿದ್ದು ಯಾರು ಎಂದು ಹೇಳಿಲ್ಲ,ಕೇವಲ ಸಿಸಿಟಿವಿ ಫೂಟೇಜ್ ಹಿಡಿದು ನಾಮಕಾವಸ್ತೆಗೆ ಪ್ರಕರಣವನ್ನು ಮುಗಿಸಿದ್ದಾರೆ ಎಂದು ಹೇಳಿದ್ದಾರೆ.

ಫಾಝಿಲ್ ಕೊಲೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಮ್ಮಲ್ಲೂ ಕೆಲವು ದಾಖಲೆಗಳಿವೆ.ಪೊಲೀಸರು ಕೇಳಿದರೆ ಆ ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ,ಫಾಝಿಲ್ ಕೊಲೆಯ ಹಿಂದೆ ಇರುವ ಕಾಣದ ಕೈಗಳನ್ನು ಪೊಲೀಸರು ಹೊರತರಬೇಕು ಎಂದು ಅವರು ಆಗ್ರಹಿಸಿದರು.

ಟಾಪ್ ನ್ಯೂಸ್