ಕಲಬುರ್ಗಿ;ಪತ್ನಿಯ ಶೀಲ ಶಂಕಿಸಿ ಪತಿಯೋರ್ವ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಂಬಿಕಾ ನಗರದಲ್ಲಿ ನಡೆದಿದೆ.
ಫರೀದಾ ಬೇಗಂ(39) ಕೋಲೆಯಾದ ಮಹಿಳೆ.ಪತಿ ಎಜಾಜ್ ಅಹ್ಮದ್ ಕೃತ್ಯವನ್ನು ನಡೆಸಿದ್ದಾನೆ. ಎಜಾಜ್ ಅಹ್ಮದ್ ಗೆ ಫರೀದಾ ಜೊತೆ 12 ವರ್ಷಗಳ ಮೊದಲು ವಿವಾಹವಾಗಿತ್ತು.
ವಿವಾಹದ ಕೆಲ ವರ್ಷಗಳ ಬಳಿಕ ಪತ್ನಿಯ ಶೀಲ ಶಂಕಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದ.ಇದೀಗ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಫರೀದಾ ಬೇಗಂ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಆರೋಪಿ. ಎಜಾಜ್ ಅಹ್ಮದ್ ಈ ಮೊದಲು ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ. ಬಳಿಕ ದೈಹಿಕ ಶಿಕ್ಷಕನಾಗಿ ನೇಮಕವಾಗಿದ್ದ.
ಈ ಕುರಿತು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.