ತಹಶೀಲ್ದಾರ್ ಮಾಡಬೇಕಿದ್ದ ಕೆಲಸವನ್ನು ಬೊಮ್ಮಯಿ ಪ್ರಧಾನಿ ಕೈಯಿಂದ ಮಾಡಿಸಿದ್ದಾರೆ- ಭಾಸ್ಕರ್ ರಾವ್ ಲೇವಡಿ

ಬೆಂಗಳೂರು:ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್‌ ರಾವ್‌ ಬಿಜೆಪಿಗೆ ಲೇವಡಿ ಮಾಡಿದ್ದು, ತಹಶೀಲ್ದಾರ್ ಹಂಚಬೇಕಿದ್ದ ಹಕ್ಕುಪತ್ರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ವಿತರಿಸಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ಹುದ್ದೆಯನ್ನು ತಹಶೀಲ್ದಾರ್ ಮಟ್ಟಕ್ಕೆ ಮುಖ್ಯಮಂತ್ರಿಗಳು ಇಳಿಸಿದ್ದಾರೆ ಎಂದು ಹೇಳಿದ್ದಾರೆ.

ಸರಕಾರ ವಿಫಲವಾಗಿದೆ. ತಾಂಡಾ ಮತ್ತು ಹಟ್ಟಿಗಳ ವಾಸಿ ಕುಟುಂಬಗಳಿಗೆ ತಹಶೀಲ್ದಾರ್ ಅವರು ಈ ಹಕ್ಕುಪತ್ರಗಳನ್ನು ವಿತರಿಸಬೇಕಿತ್ತು.ಆದರೆ ರಾಜ್ಯದ ಮುಖ್ಯಮಂತ್ರಿಗಳು ಅವರ ಕೆಲಸವನ್ನು ಪ್ರಧಾನಿ ಕೈಯಿಂದ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಕುರ್ಚಿ ಗಟ್ಟಿ ಮಾಡಲು ಪ್ರಧಾನಿ ಓಲೈಕೆಯಲ್ಲಿ ತೊಡಗಿದ್ದಾರೆ.ಏನೂ ಕೆಲಸ ನಡೆಯುತ್ತಿಲ್ಲ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ‌.

ಟಾಪ್ ನ್ಯೂಸ್