ಈಶ್ವರಪ್ಪಗೆ ಬೆದರಿಕೆ ಆರೋಪದಲ್ಲಿ ಕೇಸ್ ದಾಖಲು, ಮಾಜಿ ಸಚಿವರಿಗೆ ಕಳುಹಿಸಿದ್ದಾರೆ ಎನ್ನಲಾದ ಬೆದರಿಕೆ ಪತ್ರದಲ್ಲಿ ಏನಿದೆ?

ಈಶ್ವರಪ್ಪಗೆ ಬೆದರಿಕೆ ಆರೋಪದಲ್ಲಿ ಕೇಸ್ ದಾಖಲು, ಮಾಜಿ ಸಚಿವರಿಗೆ ಕಳುಹಿಸಿದ್ದಾರೆ ಎನ್ನಲಾದ ಬೆದರಿಕೆ ಪತ್ರದಲ್ಲಿ ಏನಿದೆ?





ಶಿವಮೊಗ್ಗ:ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಬೆದರಿಕೆ ಹಿನ್ನೆಲೆ ಕೇಸ್ ದಾಖಲಾಗಿದೆ.

ಬೆದರಿಕೆ‌ ಪತ್ರದಲ್ಲಿ ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ‌.ಈ ಸಂಬಂಧ ಅವರು ಪೊಲೀಸರಿಗೆ ಸೂಕ್ತ ತನಿಖೆ ನಡೆಸಿ,ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸುವಂತೆ ದೂರು ನೀಡಿದ್ದಾರೆ.




ಶಾಸಕ ಕೆ.ಎಸ್ ಈಶ್ವರಪ್ಪ ಅವರ ಶಿವಮೊಗ್ಗ ನಗರದಲ್ಲಿನ ಮಲ್ಲೇಶ್ವರದ ನಿವಾಸಕ್ಕೆ ಅನಾಮದೇಯ ಬೆದರಿಕೆ ಪತ್ರವೊಂದು ಬಂದಿದೆ.ಆ ಪತ್ರದಲ್ಲಿ ಸ್ವತಂತ್ರ್ಯ ಸೇನಾನಿಯಾದ ಟಿಪ್ಪುಸುಲ್ತಾನ್ ಬಗ್ಗೆ ನಿನ್ನು ಬಾಯಿಯಿಂದ ಮುಸ್ಲೀಂ ಗೂಂಡಾ ಅಂತ ಹೇಳಿದ್ದೆಯಲ್ಲ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿನ ಕಟ್ಟಡ ಕಟ್ಟಲಿಕ್ಕೆ ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕೆ ನಿನಗೆ,ಆದ್ರೇ.. ನಿನಗೆ ಮುಸ್ಲಿಮರು ಬೇಡ ಮಗನೆ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಮಗನೆ,ಬಾಲ ಬಿಚ್ಚ ಬೇಡ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆಂದು‌ ದೂರು ನೀಡಲಾಗಿದೆ.



ಅನಾಮದೇಯ ಬೆದರಿಕೆ ಪತ್ರ ಬಂದ ಕಾರಣ,ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆ.ಎಸ್ ಈಶ್ವರಪ್ಪ ಆಪ್ತ ಸಹಾಯಕ ದೂರು ನೀಡಿದ್ದಾರೆ.







ಟಾಪ್ ನ್ಯೂಸ್