ಕಂಠಪೂರ್ತಿ ಕುಡಿದು ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು

ಶಿವಮೊಗ್ಗ;ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾದ ಇಬ್ಬರು ಚುನಾವಣಾ ಅಧಿಕಾರಿಗಳನ್ನು ವಜಾ ಮಾಡಿದ ಘಟನೆ ಶಿವಮೊಗ್ಗ ಗ್ರಾಮಾಂತರ ಮತಗಟ್ಟೆಯಲ್ಲಿ ನಡೆದಿದೆ.

ಭದ್ರಾವತಿ ತಾಲೂಕು ಬಿ.ಆರ್.ಪಿ.ತೋಟಗಾರಿಕೆ ಕ್ಷೇತ್ರದ ಸಹಾಯಕ ತೋಟಗಾರಿಕೆ ನೌಕರ ಬಿ.ರಮೇಶ್ ಹಾಗೂ ಸೊರಬ ತಾಲೂಕು ಹುರುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಮಾಲತೇಶ್ ಎನ್ ವಜಾಗೊಂಡವರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಸಿಬ್ಬಂದಿಯಾಗಿ ಕಾರ್ಯನಿರ್ವಹಣೆಗೆ ನಿಯೋಜನೆಯಾಗಿದ್ದ ಈ ಅಧಿಕಾರಿಗಳು ಕಂಠಪೂರ್ತಿ ಕುಡಿದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಚುನಾವಣಾಧಿಕಾರಿಗಳು ಶಿವಮೊಗ್ಗದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ವೇಳೆ ಮದ್ಯಪಾನ ಮಾಡಿರುವುದು ಪತ್ತೆಯಾಗಿತ್ತು.ಹೀಗಾಗಿ ಹಿರಿಯ ಚುನಾವಣಾ ಅಧಿಕಾರಿಗಳು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದಾರೆ.

ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಇಬ್ಬರು ಅಧಿಕಾರಿಗಳು ಮದ್ಯಪಾನ ಮಾಡಿರುವುದು ಧೃಢಪಟ್ಟಿದೆ.ಹೀಗಾಗಿ ಇಬ್ಬರನ್ನೂ ಕರ್ತವ್ಯದಿಂದ ವಜಾ ಮಾಡಲಾಗಿದೆ.ಈ ಕುರಿತು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಟಾಪ್ ನ್ಯೂಸ್

ಯುಎಇಯಲ್ಲಿ ಲುಲು ಯೂಸುಫ್ ಅಲಿಯ ಸಹೋದರನ ಪುತ್ರಿಯ ವಿವಾಹ; 4 ದಿನಗಳ ಕಾಲ ನಡೆದ ವಿವಾಹದಲ್ಲಿ 1000ಕ್ಕೂ ಅಧಿಕ ಸೆಲೆಬ್ರಿಟಿಗಳು ಭಾಗಿ, ಈ ವರ್ಷ ಯುಎಇಯಲ್ಲಿ ನಡೆದ ಅತಿದೊಡ್ಡ ಮದುವೆಯ ಸಿದ್ದತೆ ಹೇಗಿತ್ತು ಗೊತ್ತಾ?

ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

Developed by eAppsi.com