77 ವರ್ಷದ ಮಹಿಳೆಯೊಬ್ಬರು ತನ್ನನ್ನು ತಾನೇ ಸ್ವಯಂ ವಿವಾಹವಾಗಿ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ.
ಅಮೆರಿಕಾದ ಡೊರೊಥಿ ಫಿಡೆಲಿ ಎಂಬ 77 ವರ್ಷ ವಯಸ್ಸಿನ ಮಹಿಳೆ ತನ್ನನ್ನು ತಾನೇ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಈ ಸಾಂಕೇತಿಕ ವಿವಾಹವು ಮೇ 13 ರಂದು ಓಹಿಯೋದ ಗೋಶೆನ್‌ನಲ್ಲಿರುವ ಓ’ಬನ್ನಾನ್ ಟೆರೇಸ್ ಸಮುದಾಯ ಭವನದಲ್ಲಿ ನೆರೆಹೊರೆಯವರು, ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದಿದೆ.
ಇದೊಂದು ಭಾವನಾತ್ಮಕ ದಿನ. ನನಗೆ ಖುಷಿ ಮತ್ತು ರೋಮಾಂಚನವಾಗುತ್ತಿದೆ ಎಂದು ಫಿಡೆಲಿ ಮದುವೆ ಬಗ್ಗೆ ಹೇಳಿದ್ದಾರೆ.
ನಾನು ಜೀವನದಲ್ಲಿ ಎಲ್ಲ ಕರ್ತವ್ಯವನ್ನು ಮಾಡಿದ್ದೇನೆ. ಮಕ್ಕಳು, ಮೊಮ್ಮಕ್ಕಳಿಗೆ ಮಾಡಬೇಕಾದ ಜವಾಬ್ದಾರಿಯೆಲ್ಲವನ್ನು ನಿರ್ವಹಿಸಿದ್ದೇನೆ. ಈಗ ನನಗೆ ನಾನು ಏನಾದರೂ ಮಾಡಿಕೊಳ್ಳುವ ಸಮಯ. ಹಾಗಾಗಿ ಈ ಮದುವೆ”ಎಂದು ಫಿಡೆಲಿ ಹೇಳಿದ್ದಾರೆ.
ಫಿಡೆಲಿ ಅವರಿಗೆ ಸ್ವಯಂ ವಿವಾಹವಾಗುವ ಆಲೋಚನೆ ಬಂದಿದ್ದು, ನೆರೆಹೊರೆಯವರಿಂದ. ಟಾಕ್ ಶೋನಲ್ಲಿ ಮಹಿಳೆಯೊಬ್ಬರು ಈ ರೀತಿ ಮಾಡುವುದನ್ನು ನೋಡಿದ ನೆರೆಹೊರೆಯವರು ಅದನ್ನು ಇವರೊಂದಿಗೆ ಹಂಚಿಕೊಂಡಾಗ “ಹೌದು, ನಾನೇಕೆ ನನ್ನನ್ನೇ ಮದುವೆಯಾಗಬಾರದು” ಎಂದು ಪ್ರಶ್ನಿಸಿಕೊಂಡೆ. ಆ ಆಲೋಚನೆ ನನಗೆ ಹೊಸ ಉತ್ಸಾಹ ನೀಡಿತು Ms ಫಿಡೆಲಿ ಹೇಳಿದ್ದಾರೆ ಎಂದು WLWT ವರದಿ ಮಾಡಿದೆ.
ಫಿಡೆಲಿ ಈಗ ಸ್ಚಯಂ ವಿವಾಹವಾಗುತ್ತಿದ್ದರೂ, ಈ ಹಿಂದೆ ಇವರು ಸಹ ಎಲ್ಲರಂತೆ ಸಹಜವಾದ ಮದುವೆಯಾಗಿದ್ದರು. 1965ರಲ್ಲಿ ಪುರುಷನೊಂದಿಗೆ ಮದುವೆಯಾಗಿದ್ದ ಇವರು 9 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು.