ಮಂಗಳೂರು:ಜೂನ್.29 ರಂದು ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಮತ್ತು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ತಿಳಿಸಿದ್ದಾರೆ.
ಜೂ.18(ರವಿವಾರ)ರಂದು ಕೇರಳ, ಕರಾವಳಿ ಜಿಲ್ಲೆಗಳಲ್ಲಿ ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾದ ಮಾಹಿತಿ ಲಭ್ಯವಾಗದ ಕಾರಣ ದುಲ್ಹಜ್ 1 ಜೂ.20ರಂದು ಆಗಿರುತ್ತದೆ.ಆದ್ದರಿಂದ ಜೂ.29 ಗುರುವಾರದಂದು ಈದುಲ್ ಅಝ್ ಹಾ ಆಚರಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರವಿವಾರ ರಾತ್ರಿ ಸೌದಿ ಅರೇಬಿಯಾದಲ್ಲಿ ದುಲ್ ಹಜ್ಜ್
ಚಂದ್ರದರ್ಶನವಾಗಿರುವುದನ್ನು ಸೌದಿ ಸುಪ್ರೀಂ ಕೋರ್ಟ್ ಖಚಿತಪಡಿಸಿದೆ.
ಇದರಿಂದ ಸೌದಿ ಅರೇಬಿಯಾದಲ್ಲಿ ಅರಾಫಾದ ದಿನವು ಮಂಗಳವಾರ, ಜೂನ್ 27 ರಂದು ನಡೆಯಲಿದೆ. ಈದ್ ಅಲ್ ಅಝ್ಹಾ ಆಚರಣೆ ಜೂನ್ 28 ರಂದು ನಡೆಯಲಿದೆ.