ಯೋಧರು ಹುತಾತ್ಮರಾದ ಸುದ್ದಿ ತಿಳಿದು ಈ ಹಳ್ಳಿಯಲ್ಲಿ ನಿನ್ನೆ ಮುಸ್ಲಿಮರು ಈದ್ ಹಬ್ಬವನ್ನೇ ಆಚರಿಸಿಲ್ಲ!; ಹಳ್ಳಿಯ ಜನರು ಹೇಳಿದ್ದೇನು ಗೊತ್ತಾ?

ದೇಶವು ಶನಿವಾರ ‘ಈದ್-ಉಲ್-ಫಿತರ್’ ನ್ನು ಆಚರಿಸುತ್ತಿದ್ದರೆಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಈದ್ ಆಚರಣೆ ಸಂಭ್ರಮದಿಂದ ಮಾಡಿಲ್ಲ.ಜನರು ನಮಾಝ್ ಮಾಡಿ ಮನೆಯಲ್ಲೇ ಸುಮ್ಮನಿದ್ದರು.

ಭಾರತೀಯ ಸೇನೆಯ ಟ್ರಕ್‌ನ ಗುರಿಯೋಟ್ ಗ್ರಾಮವು ಗುರುವಾರ ಹೊಂಚುದಾಳಿ ನಡೆಸಿದ್ದು, ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ಸೇರಿದ್ದ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಸಾಗೋಟ್‌ನಲ್ಲಿ ನಡೆಯಲಿರುವ ಇಫ್ತಾರ್ ಕೂಟಕ್ಕಾಗಿ ಟ್ರಕ್ ಹಣ್ಣುಗಳು ಮತ್ತು ಇತರ ವಸ್ತುಗಳನ್ನು ಸಾಗಿಸುತ್ತಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಏಪ್ರಿಲ್​ 21ರಂದು ಮಧ್ಯಾಹ್ನ ಪೂಂಚ್​​ನ ಭಾಟಾ ಡೋರಿಯಾ ಬಳಿಯ ದಟ್ಟ ಅರಣ್ಯದ ಬಳಿ ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿ, ಐವರು ಯೋಧರು ಹುತಾತ್ಮರಾಗಿದ್ದರು.

ಇದರಿಂದ ಮನನೊಂದಿರುವ ಸಾಂಗಿಯೋಟ್ ಎಂಬ ಹಳ್ಳಿಯ ಜನರು ತಾವು ಯಾವ ಕಾರಣಕ್ಕೂ ರಂಜಾನ್ ಹಬ್ಬ ಆಚರಿಸುವುದಿಲ್ಲ. ಕೇವಲ ನಮಾಜ್ ಮಾಡುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ.

ಗುರುವಾರ ಸಂಜೆ 7ಗಂಟೆ ಹೊತ್ತಿಗೆ ಸಾಂಗಿಯೋಟ್ ಗ್ರಾಮದಲ್ಲಿ ಈದ್ ಉಲ್ ಫಿತರ್​ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 4000 ಜನರು ಪಾಲ್ಗೊಳ್ಳುವವರಿದ್ದರು. ಹೀಗಾಗಿ ಅಗತ್ಯ ವಸ್ತುಗಳನ್ನು ತರುವ ಜವಾಬ್ದಾರಿಯನ್ನು ಸೇನೆಯ ರಾಷ್ಟ್ರೀಯ ರೈಫಲ್ಸ್​ ಘಟಕದವರು ಹೊತ್ತಿದ್ದರು. ಅದರಂತೆ ಬಾಲಾಕೋಟ್​​ನ ಬಸೂನಿಯಲ್ಲಿರುವ ರಾಷ್ಟ್ರೀಯ ರೈಫಲ್ಸ್​ನ ಪ್ರಧಾನ ಕಚೇರಿಯಿಂದ ಹೊರಟ ಈ ಸೇನಾ ವಾಹನ ಹಣ್ಣುಗಳು ಮತ್ತು ಇತರ ವಸ್ತುಗಳನ್ನೆಲ್ಲ ಹೊತ್ತು ಸಾಗುತ್ತಿತ್ತು.

ಮಾರ್ಗಮಧ್ಯೆ ಭಿಂಬರ್​ ಗಲಿ ಎಂಬಲ್ಲಿ ಇನ್ನಷ್ಟು ವಸ್ತುಗಳನ್ನು ವಾಹನಕ್ಕೆ ತುಂಬಿಕೊಳ್ಳಬೇಕಾಗಿದ್ದರಿಂದ ಟ್ರಕ್​ನ್ನು ನಿಲ್ಲಿಸಲಾಗಿತ್ತು.ಈ ಪ್ರದೇಶದಲ್ಲಿ ಸೇನಾ ಬೆಂಗಾವಲು ವಾಹನಗಳ ಚಲನೆ ಸದಾ ಇರುತ್ತದೆ. ಹೀಗಾಗಿ ರಾಷ್ಟ್ರೀಯ ರೈಫಲ್ಸ್​ ಸಿಬ್ಬಂದಿಯೂ ಇಲ್ಲಿ ಸಕ್ರಿಯರಾಗಿ ಉಪಸ್ಥಿತರಿರುತ್ತಾರೆ.ಇದೇ ಕಾರಣಕ್ಕೆ ತಮ್ಮ ಎಂದಿನ ಜಾಗದಲ್ಲೇ ಟ್ರಕ್​ ನಿಲ್ಲಿಸಿಕೊಂಡಿದ್ದರು. ಅಲ್ಲಿಂದ ಸಾಂಗಿಯೋಟ್ ಗ್ರಾಮ ಕೇವಲ 8ಕಿಮೀ ಅಷ್ಟೇ. ಆದರೆ ಅಲ್ಲಿಗೆತಲುಪುವ ಮೊದಲೇ ಆ ಟ್ರಕ್​ ಉಗ್ರರ ದಾಳಿಗೆ ಹೊತ್ತಿ ಉರಿದಿದೆ.

ಹೀಗೆ ಗ್ರಾಮದಲ್ಲಿ ನಡೆಯಬೇಕಿದ್ದ ಸಂತೋಷ ಕೂಟಕ್ಕೆ ಹಣ್ಣು/ಸಿಹಿ ಇನ್ನಿತರ ವಸ್ತುಗಳನ್ನು ತರುತ್ತಿದ್ದ ಯೋಧರು ಬಲಿಯಾದ ಕಾರಣಕ್ಕೆ ಹಳ್ಳಿಯ ಜನರು ರಂಜಾನ್​ ಆಚರಣೆಯಿಂದ ದೂರ ಸರಿದಿದ್ದಾರೆ.

ನಾವು ಶನಿವಾರ ಈದ್​ ಹಬ್ಬ ಆಚರಿಸುತ್ತಿಲ್ಲ. ನಮಾಜ್ ಮಾತ್ರ ಮಾಡುತ್ತೇವೆ ಎಂದು ಶುಕ್ರವಾರವೇ ಅಲ್ಲಿನ ಪಂಚಾಯಿತಿಯ ಸರಪಂಚ್​ ಮುಖ್ತಿಯಾಜ್​ ಖಾನ್ ಹೇಳಿದ್ದರು.ಮೃತಪಟ್ಟ ರಾಷ್ಟ್ರೀಯ ರೈಫಲ್ಸ್​​ ಘಟಕದ ಯೋಧರು ನಮ್ಮ ಹಳ್ಳಿ ಮತ್ತು ಸುತ್ತಲಿನ ಪ್ರದೇಶಗಳ ರಕ್ಷಣೆಗೆ ನಿಯೋಜಿತಗೊಂಡಿದ್ದವರು.ಅವರ ಜೀವ ಹೋಗಿದ್ದು ನಮಗೆ ನೋವು ತಂದಿದೆ.ಹೀಗಾಗಿ ಹಬ್ಬ ಆಚರಣೆ ಮಾಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com