ಬೆಳ್ತಂಗಡಿ;ಬಾಣಂತಿಯೊಬ್ಬರಿಗೆ ಅಂಗನವಾಡಿಯಲ್ಲಿ ವಿತರಿಸಿದ್ದ ಮೊಟ್ಟೆ ಕೊಳೆತಿದ್ದು,ಕಳಪೆ ಪೂರೈಕೆ ಆರೋಪ ಕೇಳಿ ಬಂದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ರೆಖ್ಯಾ ಗ್ರಾಮದ ಎಂಜಿರ ಕಟ್ಟೆ ಅಂಗನವಾಡಿಯಿಂದ ವಿತರಣೆಯಾಗಿದ್ದ ಮೊಟ್ಟೆಗಳು ಕೊಳೆತಿದ್ದ ಆರೋಪ ಕೇಳಿ ಬಂದಿದೆ. ಸದ್ಯ ಕೊಳೆತ ಮೊಟ್ಟೆಯ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಾಣಂತಿಯರಿಗೆ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮನೆಗೆ ತಂದು ಮೊಟ್ಟೆ ಬೇಯಿಸಿದಾಗ ಸಂಪೂರ್ಣ ಕೊಳೆತು ಹೋಗಿರುವುದು ಪತ್ತೆಯಾಗಿದ್ದು, ಬೇಯಿಸಿದ ಮೊಟ್ಟೆಯೊಳಗೆ ರಕ್ತ ಹೆಪ್ಪುಗಟ್ಟಿ ಕೊಳೆತು ದುರ್ನಾತ ಬೀರಿದೆ. ಅಲ್ಲದೇ ಕೆಲ ಮೊಟ್ಟೆಯಲ್ಲಿ ಕೋಳಿ ಮರಿ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ
ರೆಖ್ಯಾ ಗ್ರಾಮದ ಕಿರಣ್ ಕುಮಾರ್ ಎಂಬವರ ಪತ್ನಿಗೆ ವಿತರಿಸಿದ್ದ ಮೊಟ್ಟೆಗಳಾಗಿದ್ದು, ಈ ಬಗ್ಗೆ ಅಂಗನವಾಡಿ ಶಿಕ್ಷಕಿಗೆ ಮಾಹಿತಿ ನೀಡಿರುವ ಕುಟುಂಬಿಕರು ಮೇಲಾಧಿಕಾರಿಗೂ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಆ ಮೊಟ್ಟೆ ನಮ್ಮದೇ ಅಂಗನವಾಡಿಯದ್ದು ಅಂತ ಹೇಗೆ ಹೇಳೋದು ಅಂತ ಶಿಕ್ಷಕಿ ಕೇಳಿದ್ದಕ್ಕೆ ಮನೆಯವರು ಕೂಡ ಶಿಕ್ಷಕಿಗೆ ಮಾಹಿತಿ ನೀಡಿ ಸುಮ್ಮನಾಗಿದ್ದಾರೆ. ಈಗೆ ಕೇಳಿದರೆ ನಾವು ಅದು ಅಂಗನವಾಡಿಯದ್ದೇ ಅಂತ ಹೇಗೆ ಸಾಕ್ಷ್ಯ ಕೊಡೋದು ಎಂದು ಮನೆಯವರು ಕೂಡ ದೂರು ನೀಡಿ ಮೌನವಾಗಿದ್ದಾರೆ.
ಆದರೆ ಸರ್ಕಾರದ ಯೋಜನೆ ಹೆಸರಿನಲ್ಲಿ ಬಾಣಂತಿಯರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯ ಅರೋಪ ಕೇಳಿ ಬಂದಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕೊಳೆತ ಮೊಟ್ಟೆಗಳು ಅಂಗನವಾಡಿಯಿಂದ ಸಿಕ್ಕಿದೆ ಆದರೆ ಬಾಣಂತಿಯರು ಅದನ್ನು ಎಸೆದು ಸುಮ್ಮನಾಗುತ್ತಿದ್ದರು ಎನ್ನಲಾಗಿದೆ.