ಇಡಿ ಅಧಿಕಾರಿಗಳಂತೆ ವೇಷ ಧರಿಸಿ ಜುವ್ಯೆಲ್ಲರಿ ಶಾಪ್ ಗೆ ಬಂದು ಸಿಕ್ಕಿಬಿದ್ದ ಕಳ್ಳರು

ಬೆಂಗಳೂರು;ನೆಲ್ಲೂರು ಜಿಲ್ಲೆಯಲ್ಲಿ ಕಳ್ಳರ ತಂಡವೊಂದು ಬೆಂಗಳೂರು ಜಾರಿ ನಿರ್ದೇಶನಾಲಯ ಹೆಸರಲ್ಲಿ ಭಾರಿ ಕಳ್ಳತನಕ್ಕೆ ಯೋಜನೆ ರೂಪಿಸಿ ಸಿಕ್ಕಿಬಿದ್ದಿದೆ.
ನೆಲ್ಲೂರು ಕಾಕರ್ಲಾವರಿ ಸ್ಟ್ರೀಟ್‌ನ ಲಾವಣ್ಯ ಜ್ಯುವೆಲರ್ಸ್‌ನಲ್ಲಿ ಇಡಿ ಅಧಿಕಾರಿಗಳ ತಪಾಸಣೆ ಹೆಸರಲ್ಲಿ ದಾಳಿ ನಡೆಸಿದ ಕಳ್ಳರು ಸುಮಾರು 12 ಕೆಜಿ ಚಿನ್ನ ಲೂಟಿ ಮಾಡಲು ಯೋಜಿಸಿದ್ದರು.
ಇವರ ಚಲನವಲನಗಳ ಮೇಲೆ ಅಂಗಡಿ ಮಾಲೀಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ನಕಲಿ ವೇಷಾಧರಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ.ಈ ವೇಳೆ,ಕಳ್ಳರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳನ್ನು ಹೊರಗೆ ತರುವ ವೇಳೆ ಸ್ಥಳೀಯರು ದಾಳಿ ಮಾಡಿದ್ದಾರೆ.ಪೊಲೀಸರ ಎದುರೇ ಕಳ್ಳರ ಮೇಲೆ ಹಲ್ಲೆ ಮಾಡಿದ್ದಾರೆ.ಬಳಿಕ ಪೊಲೀಸರ ಮಧ್ಯಪ್ರವೇಶಿಸಿ ಆರೋಪಿಗಳನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.ಟಾಪ್ ನ್ಯೂಸ್